Mankutimmana Kagga by D.V. Gundappa
ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು । ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ॥ ನಿತ್ಯಜೀವನದಿ ನೀನಾ ನಯವನನುಸರಿಸೊ । ಸ್ವತ್ವದಾಶೆಯ ನೀಗಿ - ಮಂಕುತಿಮ್ಮ ॥ ೭೧೦ ॥
pratyakShavillada aa svAmiyam nene nenedu । satya bhaktiya sEvegeydavam bharatam ॥ nityajIvanadi nInu aa nayavanu anusariso । svatvada aasheyanu nIgi - Mankutimma ॥ 710 ॥
ಪ್ರತ್ಯಕ್ಷವಾಗಿ ತನ್ನ ಹಿಂದೆ ನಿಂತು ಆದೇಶಿಸದಿದ್ದರೂ, ರಾಮನನ್ನೇ ರಾಜನೆಂದು ನೆನೆದು ಶ್ರದ್ಧೆಯಿಂದ, ಸತ್ಯವಾದ ಭಕ್ತಿಯಿಂದ ಸೇವೆಯನ್ನು ಮಾಡಿದವನು ಭರತ. ನೀನೂ ಸಹ ನಿನ್ನ ನಿತ್ಯ ಜೀವನದಲ್ಲಿ ಸ್ವಾರ್ಥವನ್ನು ತೊರೆದು, ಭರತನಂತೆ ಜೀವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.
The master is not present to oversee. Yet, Bharata always kept him in his mind and served the cause (being a king) with true dedication. In every day life, we must follow this principle everyday. We must set aside our selfish desires. - Mankutimma
Video Coming Soon
Detailed video explanations by scholars and experts will be available soon.