Mankutimmana Kagga by D.V. Gundappa
ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ । ಬಿಡನೊಂದನುಂ ರಾಜ್ಯ ತನದಲ್ಲವೆಂದು ॥ ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ । ಕಡುಯೋಗಿ ಭರತನಲ? - ಮಂಕುತಿಮ್ಮ ॥ ೭೦೮ ॥
oDarisuvanu ellavan, adAvudu tanadalla । biDanondanum rAjya tanadallavendu ॥ naDevam svatantradali salisute vidhEyateya । kaDuyOgi bharatanala? - Mankutimma ॥ 708 ॥
ಯಾವುದೂ ತನ್ನದಲ್ಲದದ್ದಿರೂ, ಭರತ ತಾನೇ ರಾಜನಂತೆ ರಾಜ್ಯಭಾರ ನಡೆಸುವನು ಮತ್ತು ಈ ರಾಜ್ಯ ರಾಮನಿಗೆ ಸೇರಿದ್ದು, ತನ್ನದಲ್ಲ ಎಂದು ಯಾವ ಕೆಲಸವನ್ನೂ ಬಿಡುವುದಿಲ್ಲ. ತನ್ನ ಪಾಲಿಗೆ ಬಂದ ಕೆಲಸವನ್ನು ಸ್ವತಂತ್ರವಾಗಿ ನಿರ್ಧರಿಸುತ್ತಿದ್ದರೂ, ಅಂತರಂಗದಲ್ಲಿ ರಾಮನಿಗೆ ವಿಧೇಯತೆಯನ್ನು ತೋರುತ್ತಾ ಇದ್ದ ಅ ಭರತ ನಿಜಕ್ಕೂ ಮಹಾನ್ ಯೋಗಿಯೇ ಎಂದು,ಹೇಳುತ್ತಾ ಈ ಜಗತ್ತು ತಮ್ಮದಲ್ಲದಿದ್ದರೂ ಜೀವನವನ್ನು ಯಾವ ರೀತಿ ನಿರ್ವಹಿಸಬೇಕು ಎನ್ನವುದಕ್ಕೆ ನಮಗೊಂದು ಉದಾಹರಣೆಯನ್ನು ನೀಡಿ ಸೂಚ್ಯವಾಗಿ ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
He commands the entire state. But realizes that it is not his to command. He looks over every thing even if it is not his responsibility. He is free to do anything. But he chooses to be faithful to his brother. Isn't Bharata a great yogi (ascetic)? - Mankutimma
Video Coming Soon
Detailed video explanations by scholars and experts will be available soon.