Back to List

Kagga 707 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಒಡೆಯನೆಂದೋ ಬಂದು ಕೇಳ್ವನದಕುತ್ತರವ । ಕೊಡಬೇಕು ತಾನೆನುವವೊಲು ಋಜುತೆಯಿಂದ ॥ ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು । ಮುಡುಪುಕೊಟ್ಟನು ಭರತ - ಮಂಕುತಿಮ್ಮ ॥ ೭೦೭ ॥

oDeyanu endO bandu kELvanu adakuttarava । koDabEku tAnu enuvavolu Rujuteyinda ॥ oDala, jANIna, jIvashaktigaLanellavanu । muDUpukoTTanu bharata - Mankutimma ॥ 707 ॥

Meaning in Kannada

‘ರಾಮನ ರಾಜ್ಯವನ್ನು ಆಳುತ್ತಿದ್ದೇನೆ’ ಎಂದು ಪರಿಗಣಿಸಿ, ಅವನ ಪಾದುಕೆಗಳನ್ನು ಸಿಂಹಾಸನದಮೇಲೆ ಇರಿಸಿ, ಎಂದಾದರೂ ಒಂದು ದಿನ ಎನ್ನ ಒಡೆಯ ನಾನು ಮಾಡಿದ ಎಲ್ಲ ಕೆಲಸಗಳಿಗೂ ವಿಶ್ಲೇಷಣೆಯನ್ನು ಕೇಳುತ್ತಾನೆ ಎಂಬಂತೆ ತನ್ನ ದೇಹ, ಬುದ್ಧಿವಂತಿಕೆ ಮತ್ತು ಚೈತನ್ಯವನ್ನೆಲ್ಲ, ನಿರಪೇಕ್ಷೆಯಿಂದ, ಪ್ರಾಮಾಣಿಕತೆಯಿಂದ ರಾಮನ ರಾಜ್ಯವನ್ನಾಳಲು ಮುಡುಪಾಗಿಟ್ಟ ಭರತನಂತೆ, "ನೀನೂ ಸಹ ಬದುಕು" ಎಂದು ಸೂಚಿಸುವಂತೆ ನಮಗೊಂದು ಆದೇಶವನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

The real owner of this (Kingdom) will come back one day. He will ask for a detailed account and I must provide one. This was Bharata's mantra while running the state while Rama was away. He was always righteous. He gave his body, mind and his life towards this single goal. - Mankutimma

Themes

LifeMoralityWar

Video Section

Video Coming Soon

Detailed video explanations by scholars and experts will be available soon.