Mankutimmana Kagga by D.V. Gundappa
ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- । ಳೊರೆಯದೊಡಮೆನನಂ, ತಾಂ ವರದಿಯೊರೆದು॥ ದೊರೆತನದ ಭಾರವನು ಹೊತ್ತು ದೊರೆಯಾಗದಾ । ಭರತನವೊಲಿರು ನೀನು - ಮಂಕುತಿಮ್ಮ ॥ ೭೦೬ ॥
arasu aDavige aididoDam, avanitta pAdukegaLa । oreyadoDam Enanam, tAm varadiyoredu ॥ doretanada bhAravanu hottu doreyAgada aa । bharatanavol iru nInu - Mankutimma ॥ 706 ॥
ರಾಜನಾಗಬೇಕಾದ ‘ರಾಮ’ ನು ತಂದೆಯ ಆಜ್ಞೆಯಂತೆ ಕಾಡಿಗೆ ಹೋದಮೇಲೆ, ತಂದೆ ದಶರಥನ ಮರಣಾನಂತರ, ಭರತನು ಅಣ್ಣನನ್ನು ಮತ್ತೆ ರಾಜ್ಯಕ್ಕೆ ಬರಹೇಳಿ, ಓಲೈಸಿ, ವಿಫಲನಾಗಿ, ಕಡೆಗೆ ಅವನ ಪಾದುಕೆಗಳನ್ನು ಬೇಡಿ ತಂದು, ಅವುಗಳನ್ನೇ ಸಿಂಹಾಸನದ ಮೇಲೆ ಇಟ್ಟು, ಆ ಪಾದುಕೆಗಳು ಯಾವ ರೀತಿಯ ಆದೇಶಗಳನ್ನೂ ನೀಡದಿದ್ದರೂ, ದೇಶದ ಎಲ್ಲ ಆಗುಹೋಗುಗಳನ್ನೂ, ಆ ಪಾದುಕೆಗಳೇ ‘ರಾಜ’ನೆಂಬಂತೆ ಅವುಗಳಿಗೆ ವರದಿ ಮಾಡುತ್ತಾ, ದೊರೆತನದ ಭಾರವನ್ನು ಹೊತ್ತಿದ್ದರೂ ತಾನು ದೊರೆ ಎನ್ನುವ ಭಾವವಿಲ್ಲದೆ ನಡೆದುಕೊಂಡ ‘ಭರತ’ ನ ದೃಷ್ಟಾಂತವನ್ನು ನೀಡಿ ನೀನು ಅವನಂತೆ ಈ ಜೀವನದಲ್ಲಿರು ಎಂದು ನಿರ್ಮೋಹ ಮತ್ತು ನಿರ್ಲಿಪ್ತತೆಯನ್ನು ತಿಳಿಹೇಳುವ ಆದೇಶವನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The King was exiled to the forest. But he brought his sandals to the city and placed them on the throne. He gave updates (to the throne) on the matters of the state even when not asked for. He bore the burden of being a king without ever being one. You must be like that Bharatha. - Mankutimma
Video Coming Soon
Detailed video explanations by scholars and experts will be available soon.