Mankutimmana Kagga by D.V. Gundappa
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- । ದಂತರಂಗದ ಕಡಲು ಶಾಂತಿಗೊಳಲಹುದು ॥ ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ । ಸಂತಯಿಸು ಚಿತ್ತವನು - ಮಂಕುತಿಮ್ಮ ॥ ೭೦೫ ॥
santatada shikSheyim dIrghada abhyAsadinda । antarangada kaDalu shaantigoLalahudu ॥ santRupta vRuttiyinda EkAnta sEveyim । santayisu chittavanu - Mankutimma ॥ 705 ॥
ನಿರಂತರ ಪ್ರಯತ್ನದ ಶಿಕ್ಷಣದಿಂದ ಮತ್ತು ದೀರ್ಘ ಅಭ್ಯಾಸದಿಂದ ಅಂತರಂಗದ ಕಡಲು ಶಾಂತವಾಗುತ್ತದೆ. ತೃಪ್ತಿ ಮತ್ತು ಸಂತೃಪ್ತಿಯಿಂದ ನಿನ್ನಲ್ಲಿ ನೀನೇಸಂತೋಷಪಡುತ್ತಾ ಏಕಾಂತದಲಿ ಆತ್ಮಸಂದಾನಮಾಡಿಕೊಳ್ಳುತ್ತಾ ಮನಸ್ಸನ್ನು ಸಂತೈಸಿಕೊಳ್ಳಬೇಕು, ಎಂದು ಒಂದು ಉಪದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
One must punish the mind for straying always and resort to long term training on austerity. Only then one can attain inner tranquillity. One must placate his mind by being satisfied at work and serving (God) alone. - Mankutimma
Video Coming Soon
Detailed video explanations by scholars and experts will be available soon.