Back to List

Kagga 704 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಮತೆಸಂಯಮಶಮಗಳಿಂ ಭವವನೋಲಗಿಸೆ । ಸಮನಿಪುದು ಮತಿಯ ಹದವಾತ್ಮಾನುಭವಕೆ ॥ ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ । ಶ್ರಮಿಸಿಳೆಯ ಗಾಣದಲಿ - ಮಂಕುತಿಮ್ಮ ॥ ೭೦೪ ॥

samate samyama shamagaLim bhavavanu Olagise । samanipudu matiya hadava atmAnubhavake ॥ mamateya aLivim jnAna; pAnDityadindalla । shramisu iLeya gANadali - Mankutimma ॥ 704 ॥

Meaning in Kannada

ಸಮಾನತೆ, ಇಂದ್ರಿಯ ನಿಗ್ರಹ, ಮತ್ತು ಶಾಂತಿಯಿಂದ ಭವ, ಎಂದರೆ ಇಲ್ಲಿನ ಬದುಕನ್ನು ಪ್ರೀತಿಯಿಂದ ನಡೆಸಿಕೊಂಡರೆ, ಮನಸ್ಸು ಬುದ್ಧಿಗಳ ಹದವು ಆತ್ಮಾನುಭವಕ್ಕೆ ಸಮಾನವಾಗುತ್ತದೆ. ಮಮಕಾರವು ನಾಶವಾದರೆ ಮಾತ್ರ ಜ್ಞಾನದ ಹೊಳಪು ಅಂತರಂಗದಲ್ಲಿ ಬೆಳಗುತ್ತದೆ, ಪಾಂಡಿತ್ಯದಿಂದಲ್ಲ. ಆದ್ದರಿಂದ ಈ ಜಗತ್ತೆಂಬ ಗಾಣದಲ್ಲಿ ನಿನ್ನ ಬದುಕನ್ನು ಆಡಿಸಿಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

See everyone equally. Have control over your senses. Exercise restraint. You should serve the world thus. If you do so, the mind will be in your control and lead to beautiful experiences of the soul. Knowledge comes when the attachment ends - not by being a scholar. You have to work hard on the shop-floor of this world. There is no other way. - Mankutimma

Themes

WisdomLifeDeathPeaceDuty

Video Section

Video Coming Soon

Detailed video explanations by scholars and experts will be available soon.