Mankutimmana Kagga by D.V. Gundappa
ಬೇಕು ಜೀವನಯೋಗಕೊಂದು ಬಹುಸೂಕ್ಷ್ಮನಯ । ಬೇಕೊಂದು ಜಾಗರೂರಕತೆ, ಬುದ್ಧಿ ಸಮತೆ ॥ ತಾಕನೊಂದನು ಯೋಗಿ, ನೂಕನೊಂದನು ಜಗದಿ । ಎಕಾಕಿ ಸಹವಾಸಿ - ಮಂಕುತಿಮ್ಮ ॥ ೭೦೩ ॥
bEku jIvana yOgakondu bahusUkShma naya । bEkondu jAgarUkate, buddhi samate ॥ tAkanondanu yOgi, nUkanondanu jagadi । ekAki sahavAsi - Mankutimma ॥ 703 ॥
ಜೀವನವೆನ್ನುದುವು ಒಂದು ಯೋಗದಂತೆ. ಅದು ಬಹಳ ಸೂಕ್ಷ್ಮ ಮತ್ತು ನಯ. ಇದನ್ನು ಸಮರ್ಪಕವಾಗಿಸಲು ನಾವು ಬಹಳ ಜಾಗರೂಕರಾಗಿ, ಸಮಬುದ್ಧಿಯಿಂದ ಇರಬೇಕು. ಯೋಗಿಯಾದವನು ಎಲ್ಲದರಲ್ಲೂ ಇದ್ದು, ಯಾವುದರಲ್ಲೂ ಇರದಂತೆ ಇದ್ದು, ಅಂತರಂಗದಲ್ಲಿ ‘ತನಗೆ ತಾನೇ’ ಹೇಗಿರುತ್ತಾನೋ ಹಾಗಿರಬೇಕು. ಎಂದು ಹೇಳಿ ನಾವು ಬದುಕಿನ ಪಯಣವನ್ನು ಹೇಗೆ ಸಾಗಿಸಬೇಕು ಎನ್ನುವುದನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Happiness in life needs a very precise balance. It needs utmost caution and tranquility of mind. A practitioner of this art will not get attached to any thing in life. He will neither reject anything. He is standing alone while being friends with the entire world. - Mankutimma
Video Coming Soon
Detailed video explanations by scholars and experts will be available soon.