Back to List

Kagga 702 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನೆಯ ಸಂಸಾರದಲಿ ವಾಸವಿರುತಾಗಾಗ । ನೆನೆದು ನೀಂ ದೇಗುಲಕೆ ಪೋಗಿಬರುವಂತೆ ॥ ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ । ಮನೆಗೆ ಬರುವನವೊಲಿರು - ಮಂಕುತಿಮ್ಮ ॥ ೭೦೨ ॥

maneya samsAradali vAsaviruta aagAga । nenedu nIm degulake pOgi baruvante ॥ dinavella dEva sannidhiyoL iruta aagAga । manege baruvanavOl iru - Mankutimma ॥ 702 ॥

Meaning in Kannada

ಸಂಸಾರದಲ್ಲಿರುವ ನೀನು ಆಗಾಗ ದೇವಾಲಯಕ್ಕೆ ಹೋಗಿ ಬರುವಂತೆ, ಹೆಚ್ಚು ಕಾಲ ದೇವಾಲಯದಲ್ಲಿ ಕಳೆದು ಆಗಾಗ ಮನೆಗೆ ಬಂದುಹೋಗುವವನಂತಾಗು ಎಂದು ಸೂಚನೆಯನ್ನಿತ್ತು ಮನೋವ್ಯಾಪಾರವನ್ನುಹೇಗಿಟ್ಟುಕೊಂಡರೆ ನಮಗದು ಹಿತವಾಗುತ್ತದೆ ಎಂದು ಬದುಕಿನ ಒಂದು ಸೂಕ್ಷ್ಮವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You live in this material world all the time. You remember God and visit the temple once in a while. But mentally, you should be close to God most of the time and visit home once in a while. - Mankutimma

Themes

DevotionLife

Video Section

Video Coming Soon

Detailed video explanations by scholars and experts will be available soon.