Back to List

Kagga 701 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ । ಹೊರಕೋಣೆಯಲಿ ಲೋಗರಾಟಗಳನಾಡು ॥ ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ । ವರಯೋಗಸೂತ್ರವಿದು - ಮಂಕುತಿಮ್ಮ ॥ ೭೦೧ ॥

eraDu kONegaLa nIm mADu manadAlayadi । horakONeyali lOgaraaTagaLanADu ॥ viramisobbane maunadi oLamaneya shAntiyali । vara yOga sUtravidu - Mankutimma ॥ 701 ॥

Meaning in Kannada

ಮನದ ಆಲಯದಲ್ಲಿ ನೀನು ಎರಡು ಕೋಣೆಗಳನ್ನು ಮಾಡು. ಹೊರಗಿನ ಕೋಣೆಯಲಿ ಲೋಕದ ಆಟವನ್ನಾಡು. ಒಳಗಿನ ಕೋಣೆಯಲಿ ಮೌನದಿಂದ ತುಂಬಿದ ಶಾಂತಿಯಲ್ಲಿ ವಿಶ್ರಮಿಸು. ಒಳಹೊರಗುಗಳ ಮಧ್ಯೆ ಒಂದು ಸಸಮನ್ವಯವನ್ನು ಕಾಪಾಡಿಕೊಳ್ಳಲು ಇದು ವರದಂತಹ ಸೂತ್ರ, ಎಂದು, ನಮ್ಮ ಮನಃ ಫಟಲದ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನವನ್ನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You make two rooms in your mind. In the outer room, you go about performing worldly actions that is required to be done in order to survive this world. You rest alone in the inner room remain silent. You will find peace. This is the the way you will find balance in life. - Mankutimma

Themes

LifePeace

Video Section

Video Coming Soon

Detailed video explanations by scholars and experts will be available soon.