Mankutimmana Kagga by D.V. Gundappa
ವಾಸನೆ ವಿವೇಚನೆಗಳೆರಡಕಂ ಸಂಗರ್ಷ । ಪ್ರಾಚೀನಕಂ ಪೌರುಷಕ್ಕಮಿರುವಂತೆ ॥ ಆಶಾವಿನಾಶಮುಂ ಧೀಶಕ್ತಿಯುದ್ಭವಮುಮ್ । ಈಶಪ್ರಸಾದದಿಂ - ಮಂಕುತಿಮ್ಮ ॥ ೭೦೦ ॥
vAsane vivEchanegaLu eraDakam sangarSha। prAchInakam pauruShakkam iruvante ॥ aashA vinaashamum dhIshaktiya udbhavamum । eeshaprasAdadim - Mankutimma ॥ 700 ॥
ನಮ್ಮ ‘ಗುಣಗಳ ‘ರೂಪದಲ್ಲಿರುವ ವಾಸನೆಗಳು ಮತ್ತು ನಮ್ಮ ವಿವೇಕದ ನಡುವಿನ ಸಂಘರ್ಷದಿಂದ, ಹಿಂದಿನಿಂದ ಬಂದ ನಮ್ಮ ಗುಣಗಳಿಗೂ ನಮಗಿರುವ ವಿವೇಕದಿಂದ ಕೂಡಿದ ಬುದ್ಧಿಶಕ್ತಿಗೂ ನಡೆಯುವ ಸಂಘರ್ಷದಿಂದ ನಮ್ಮ ಆಸೆಗಳು ನಶಿಸಿ ಪರಮಾತ್ಮನನ್ನು ಮತ್ತು ಪರತತ್ವವನ್ನು ಅರಿಯುವ ಶಕ್ತಿಯು ನಮ್ಮಲ್ಲಿ ಆ ಪರಮಾತ್ಮನ ಪ್ರಸಾದದಂತೆ ಸಿಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There are always struggles between these - urge to indulge and wisdom that says to refrain, old wisdom and new enthusiasm. It depends on the strength of the individual which one wins. But to be able to destroy desire and enhance wisdom, one needs Gods grace and that alone." - Mankutimma
Video Coming Soon
Detailed video explanations by scholars and experts will be available soon.