Mankutimmana Kagga by D.V. Gundappa
ಏಸು ಸಲ ತಪಗೈದುದೇಸು ಬನ್ನವನಾಂತು । ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ॥ ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ । ಲೇಸಾಗಿಸಾತ್ಮವನು - ಮಂಕುತಿಮ್ಮ ॥ ೬೯೯ ॥
Esu sala tapagaidu Esu bannavanu aantu । kaushikam brahmarShi padake arha nAdan ॥ ghAsi paDuta innomme mattomme mara maraLi । lEsAgisu aatmavanu - Mankutimma ॥ 699 ॥
ಕೌಶಿಕನೆಂಬ ಕ್ಷತ್ರಿಯ ರಾಜನು ವಸಿಷ್ಠ ಮಹರ್ಷಿಯ ಬ್ರಹ್ಮ ತೇಜಸ್ಸಿನ ಬಲವನ್ನು ಕಂಡು ‘ ಕ್ಷಾತ್ರಬಲಕ್ಕಿಂತ ಬ್ರಹ್ಮಬಲ’ ವೇ ಉತ್ತಮವೆಂದರಿತುಅದನ್ನು ಪಡೆಯಲು ತಪಸ್ಸನ್ನು ಮಾಡಿದಾಗ, ಅವನ ತಪಸ್ಸಿಗೆ ಇಂದ್ರಾದಿದೇವತೆಗಳು ಒಡ್ಡಿದ ಹಲವಾರು ಅಡ್ಡಿಗಳನ್ನು ತಡೆದುಕೊಂಡು, ಅವುಗಳೆಲ್ಲವನ್ನು ಮೆಟ್ಟಿ ನಿಂತು, ಮತ್ತೆ ಮತ್ತೆ ತಪವನ್ನು ಮಾಡಿ ಬ್ರಹ್ಮರ್ಷಿತ್ವವನ್ನು ಪಡೆದನಲ್ಲವೇ ? ಹಾಗೆಯೇ ನೀನೂ ಸಹ ನಿನ್ನ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವ ನಿನ್ನ ಪ್ರಯತ್ನಕ್ಕೆ ಬರುವ ಅಡ್ಡಿಗಳನ್ನು ಮೆಟ್ಟಿ ನಿಂತು ಮತ್ತೆಮತ್ತೆ ಪ್ರಯತ್ನವನ್ನು ಮಾಡಿ ನಿನ್ನ ಆತ್ಮವನ್ನು ಉತ್ತಮವನ್ನಾಗಿಸಿಕೋ ಎಂದು ಮಾರ್ಗತೋರಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
How many times did Vishvamitra (Koushika) undertook stringent penances to attain the position of Brahmarshi? He failed many times. Yet, he kept trying time and again. That way he refined his soul. We should persevere like him towards our goal in spite of repeated failures." - Mankutimma
Video Coming Soon
Detailed video explanations by scholars and experts will be available soon.