Back to List

Kagga 696 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶರಧಿಯನೀಜುವನು, ಸಮರದಲಿ ಕಾದುವನು । ಗುರಿಯೊಂದನುಳಿದು ಪೆರತೊಂದ ನೋಡುವನೆ? ॥ ಮರೆಯುವನು ತಾನೆಂಬುದನೆ ಮಹಾವೇಶದಲಿ । ನಿರಹಂತೆಯದು ಮೋಕ್ಷ - ಮಂಕುತಿಮ್ಮ ॥ ೬೯೬ ॥

sharadhiyanIjuvanu, samaradali kAduvanu । guriyondanuLidu peratonda nODuvane? ॥ mareyuvanu tAnembudane mahA avEshadali । nirahanteyadu mOkSha - Mankutimma ॥ 696 ॥

Meaning in Kannada

ಕಡಲನ್ನು ಈಜುವವನು ಅಥವಾ ಯುದ್ಧದಲ್ಲಿ ಹೋರಾಡುವವನು ತನ್ನ ಗುರಿಯನ್ನು ಮಾತ್ರ ನೋಡುತ್ತಾನಲ್ಲದೆ ಬೇರೊಂದನ್ನು ನೋಡುವನೆ? ಆ ಸ್ಥಿತಿಯಲ್ಲಿ ಅವನಿಗಿರುವ ಮಹಾ ಆವೇಶದಲಿ ಅವನು ತನ್ನನ್ನೇ ತಾನು ಮರೆತು ಈಜುತ್ತಾನೆ ಅಥವಾ ಹೋರಾಡುತ್ತಾನೆ. ಹಾಗೆಯೇ ಪರತತ್ವವನು ಅರಿಯಲು ಇಚ್ಚಿಸುವವನು ‘ಅಹಂ’ಕಾರವನ್ನು ಮರೆತು, ತೊರೆದು ಏಕದೃಷ್ಟಿಯಿಂದ ಮುನ್ನಡೆದಾಗ ಅವನಿಗೆ ಮೋಕ್ಷವುಂಟಾಗುತ್ತದೆ, ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Man does many things to achieve the magnanimous - he swims across oceans, fights in wars and so on. In his quest, he does not see anything other than the goal. He forgets himself in pursuit of his quest. When the self gets dissolved, it is called Moksha (realization)." - Mankutimma

Themes

SelfWar

Video Section

Video Coming Soon

Detailed video explanations by scholars and experts will be available soon.