Back to List

Kagga 697 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? । ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ॥ ಮತ್ತುಮತ್ತನುವರ್ತಿಸುತ, ಭಂಗವಾದಂದು । ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ ॥ ೬೯೭ ॥

uttamate intendu matige tOrdoDe adEnu? । vRuttiyoL adu oori svabhAva amshavAgal ॥ mattu mattu anuvartisuta, bhangavAdandu । yatnisu innum maraLi - Mankutimma ॥ 697 ॥

Meaning in Kannada

ಪರತತ್ವವನ್ನು ಕಂಡುಕೊಳ್ಳಲು ನಾವು ‘ನಿರಹಂತೆ’ ಯನ್ನು ಬೆಳೆಸಿಕೊಳ್ಳಬೇಕು ಎಂದು ಹಿಂದಿನ ಮುಕ್ತಕದಲ್ಲಿ ಅರಿತೆವು. ಆದರೆ ‘ನಿರಹಂತೆ’ ಒಳ್ಳೆಯದು ಎಂದು ಕೇವಲ ಬುದ್ಧಿಗೆ ಅವಗಾಹನೆಯಾದರೇನು ಫಲ. ಅದನ್ನು ನಾವು ಕಾರ್ಯರೂಪಕ್ಕೆ ತಂದು, ಅದು ನಮ್ಮ ಸ್ವಭಾವವಾಗಲು ನಮ್ಮ ಪ್ರಯತ್ನಗಳಿಗೆ ತೊಡಗುಗಳು ಬಂದರೆ, ಅದನ್ನು ನಮ್ಮ ಸ್ವಾಭಾವವಾಗಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನವನ್ನು ಮಾಡು ಎಂದು ಆದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

It is not enough if the mind can know what is the righteous thing to do. One has to put it to practice in daily life again and again so that it becomes his nature. If it is broken for some reason, then start again." - Mankutimma

Themes

LifeMoralityNature

Video Section

Video Coming Soon

Detailed video explanations by scholars and experts will be available soon.