Back to List

Kagga 694 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು । ಸಂಧಿಪುದು ಕಡಲನೀರ್ಗಳನ್; ಅಂತು ಜೀವನ್ ॥ ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ । ಸಂದರುಶಿಪನು ಪರನ - ಮಂಕುತಿಮ್ಮ ॥ ೬೯೪ ॥

bandhanagaLellavanu dATi, hoLe nere nIru । sandhipudu kaDalanIrgaLan; antu jIvan॥ indriyada kaTTugaLa mIrda eekSheya OTadim । sansdarushipanu parana - Mankutimma ॥ 694 ॥

Meaning in Kannada

ಹೇಗೆ ಕೆರೆ ತುಂಬಿ ಹರಿಯುವ ನೀರು ತನಗೊಡ್ದುವ ಅಡ್ಡಿಗಳೆಲ್ಲವನ್ನೂ ದಾಟಿ, ಹರಿದು, ತನ್ನ ಗಮ್ಯವಾದ ಕಡಲನ್ನು ಸೇರುವಂತೆ, ಜೀವನೂ ಸಹ ಪರತತ್ವದ ಮೇಲೆ ಕಣ್ಣಿಟ್ಟು, ಅದನ್ನು ಸೇರುವ ಆತುರದಿಂದ, ಅದನ್ನು ಅರಿಯಲು ಇಂದ್ರಿಯಗಳು ಒಡ್ಡಿದ ಮತ್ತು ಒಡ್ಡಬಹುದಾದ ಎಲ್ಲ ಅಡ್ಡಿಗಳನ್ನೂ ದಾಟಿ ಪರತತ್ವದ ದರ್ಶನವನ್ನು ಪಡೆಯುತ್ತದೆ ಎಂದು ನಿಖರವಾಗಿ ಉಲ್ಲೇಕ್ಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The flood water from the stream (pond) will break all barriers and flow out towards the ocean to become one with the water of the sea. Just like that our individual souls will break the boundaries (limitations) of senses and become one the cosmic truth only when we let our vision go beyond the sensory world." - Mankutimma

Themes

WisdomLifeNatureWar

Video Section

Video Coming Soon

Detailed video explanations by scholars and experts will be available soon.