Back to List

Kagga 693 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇಂದ್ರಿಯಾತೀತವನು ಪಿಡಿಯಲಿಂದ್ರಿಯಕಳವೆ? । ಇಂದ್ರಧನು ಕೈದೋಟಿ ಕೊಂಕಿಗೆಟುಕುವುದೆ? ॥ ಸಂದೃಶ್ಯವಾತ್ಮಕೆ ಬೇರೆ ಕರಣದಿಂ । ತಂದ್ರಿ ಬಿಡೆ ದೊರೆವುದದು - ಮಂಕುತಿಮ್ಮ ॥ ೬೯೩ ॥

indriyAtItavanu piDiyalu indriyake aLave? । indradhanu kaidOTi konkige eTakuvude?॥ sandRushyavu aatmake bEre karaNadim। tandri biDe dorevudadu - Mankutimma ॥ 693 ॥

Meaning in Kannada

ಇಂದ್ರಿಯಗಳಿಗೆ ಅತೀತವಾದದ್ದನ್ನು ನಮ್ಮ ಇಂದ್ರಿಯಗಳಿಗೆ ಅರಿಯಲು ಸಾಧ್ಯವೇ? ಕಾಮನಬಿಲ್ಲನ್ನು ತೋಟದಲ್ಲಿ ನಾನು ಹೂವೋ ಹಣ್ಣೋ ಕೀಳಲುಪಯೋಗಿಸುವ ಕೈ ದೋಟಿಯಿಂದ ಕಿತ್ತುಕೊಳ್ಳಲು ಸಾಧ್ಯವೇ? ಹಾಗೆಯೇ ಪರತತ್ವದ ದರ್ಶನವಾಗಬೇಕಾದರೆ ಅದಕ್ಕೆ ಬೇರೆಯೇ ಉಪಕರಣ ಬೇಕು. ನೋಡಬೇಕಾದರೆ ಆಲಸ್ಯವನ್ನು ಬಿಟ್ಟು ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾರೆ ಗುಂಡಪ್ಪನವರು ಮುಕ್ತಕದಲ್ಲಿ .

Meaning & Interpretation

Can the object beyond the senses (the cosmic truth) be ever sensed by the sensory organs? Can the rainbow ever be grasped by the garden hook? The realization of the truth happens to every soul through a different medium. It can only achieved when one shuns laziness and actively looks for it." - Mankutimma

Themes

Wisdom

Video Section

Video Coming Soon

Detailed video explanations by scholars and experts will be available soon.