Mankutimmana Kagga by D.V. Gundappa
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು । ಪರತತ್ತ್ವವನು; ಬೇಕು ಬೇರೆ ಕಣ್ಣದಕೆ ॥ ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು । ಅರಳ್ವದರಿವಿನ ಕಣ್ಣು - ಮಂಕುತಿಮ್ಮ ॥ ೬೯೨ ॥
bariya Odu barivAda baribuddhi dorakisadu । para tattvavanu; bEku bEre kaNNadake ॥ chirada mamatAvEShTitada poreya paridandu । arLvadu arivina kaNNu - Mankutimma ॥ 692 ॥
ಶಾಸ್ತ್ರಗಳನ್ನು ಓದುವುದು, ಅವಗಳಲ್ಲಿನ ವಿಷಯವನ್ನು ಹಿಡಿದು ಚರ್ಚೆ, ವಾದ ಮಾಡುವುದು, ಅಥವಾ ಬುದ್ಧಿಯಿಂದ ತರ್ಕ, ಕುತರ್ಕ, ವಿತರ್ಕಗಳ ಕಸರತ್ತನ್ನು ಮಾಡಿದರೆ ಪರತತ್ವದ ದರ್ಶನವಾಗುವುದಿಲ್ಲ. ಪರತತ್ವನ್ನು ಕಾಣುವುದಕ್ಕೆ ಬೇರೊಂದು ಕಣ್ಣು ಬೇಕು. ಆದರೆ ಆ ಕಣ್ಣಿನ ಸುತ್ತ ‘ಮಮತೆ’, ಎಂದರೆ ‘ನಾನು ನನ್ನದು’ ಎಂಬ ಒಂದು ಪೊರೆ ಅಡ್ಡವಾಗಿ ಇದೆ. ಆ ಪೊರೆ ಹರಿದಂದು ಅಂದರೆ, ಅದು ತೊಲಗಿದರೆ ಒಳಗಣ್ಣ ತೆರೆದುಕೊಂಡು ನಮಗೆ ಪರತತ್ವದ ದರ್ಶನವಾಗುತ್ತದೆ ಎಂದು, ಸ್ಪಷ್ಟವಾಗಿ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Just education, just debates and just intellect is not enough to understand the cosmic universal truth. A different kind of 'eye' is required for that. When the veil of affection (that clouds our vision) gets torn down, the realization will dawn on us - they eye of knowledge will thus open." - Mankutimma
Video Coming Soon
Detailed video explanations by scholars and experts will be available soon.