Mankutimmana Kagga by D.V. Gundappa
ಸುತ್ತಿ ಸುತ್ತುವ ಖಗದ ಗೂಡ ನೆನಪೆಳೆಯುವುದು । ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ॥ ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? । ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ॥ ೬೯೧ ॥
sutti suttuva khagada gUDa nenapu eLeyuvudu । gottu nUl piDidihudu danava bayalinali ॥ tattvavondara hiDitake oggadiha bALEnu? । kitta gALIya paTavo - Mankutimma ॥ 691 ॥
ತನ್ನ ಆಹಾರಕ್ಕಾಗಿ ಎಲ್ಲೆಲ್ಲೊ ಸುತ್ತಿ ಅಲೆಯುವ ಪಕ್ಷಿ ಸಂಜೆಗೆ ತನ್ನ ಗೂಡನ್ನು ನೆನಪಿಸಿಕೊಂಡು ಸೇರುವಂತೆ, ಒಂದು ಗೂಟಕ್ಕೆ ಹಗ್ಗದ ಸಹಾಯದಿಂದ ಕಟ್ಟಿಹಾಕಿದ ದನ, ಹುಲ್ಲ ಮೇಯಲು ಆ ಹಗ್ಗದ ಅಳತೆಯ ಪರಿಧಿಯಲ್ಲೇ ಸುತ್ತುತ್ತಾ ಒಂದು ಬಂಧಕ್ಕೆ ಒಳಪಟ್ಟಂತೆ, ನಾವೂ ಸಹ ಒಂದು ತತ್ವಕ್ಕೆ ಅಥವಾ ಸಿದ್ಧಾಂತಕ್ಕೆ ಒಳಪಟ್ಟು ಬದ್ಧರಾಗದೆ ಇದ್ದರೆ, ಅದೂ ಸಹ ಒಂದು ಬಾಳೇನು? ಖಂಡಿತ ಅಲ್ಲ, ಅದು ಸೂತ್ರ ಕಿತ್ತ ಗಾಳಿಪಟದಂತಹ ಬದುಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
We feel the birds in the sky are free to what they want. But the memory of nest drags them back to the nest. A cow grazing the field is only as free as the length of the rope permits. But is there any value in total freedom? If one does not ground himself to any one philosophy, then life is like a kite whose string is severed. It is mercy of the wind." - Mankutimma
Video Coming Soon
Detailed video explanations by scholars and experts will be available soon.