Back to List

Kagga 687 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅತ್ಯಂತದುತ್ಕಟದ ಸನ್ನಿವೇಶಗಳ ಭರ । ಪ್ರತ್ಯಕ್ಷ ದರ್ಶನದಿನಲ್ಲದೆಂತಹುದು? ॥ ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ । ವಿಸ್ತಾರದದ್ಭುತವ - ಮಂಕುತಿಮ್ಮ ॥ ೬೮೭ ॥

atyantada utkaTada sanniveshagaLa bhara । pratyakSha darshanadin allade entihudu? ॥ pustakada chitradinda Uhipeya himagiriya । vistArada adbhutava? - Mankutimma ॥ 687 ॥

Meaning in Kannada

ಹಿಮಾಲಯ ಪರ್ವತದ ಒಂದು ಚಿತ್ರವನ್ನು ನೋಡಿ ಅದರ ವಿಸ್ತಾರ, ಅಗಾಧತೆಗಳನ್ನು ಊಹಿಸಲುಸಾಧ್ಯವಿಲ್ಲ. ಅದರ ಅನುಭವವಾಗಬೇಕಾದರೆ ಅದನ್ನು ನಾವು ಪ್ರತ್ಯಕ್ಷ ನೋಡಬೇಕು ಎಂದು ಹೇಳುತ್ತಾ, ಹಾಗೆಯೇ ಬದುಕಿನ ಅತ್ಯಂತ ತೀವ್ರತಮ ಘಟನೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಆ ಘಟನೆಗಳಲ್ಲಿ ನಾವೂ ಭಾಗಿಯಾಗಿ ಅದರ ಪರಿಣಾಮಗಳ ಅನುಭವವನ್ನು ಪಡೆದರೆ ಮಾತ್ರ ಸತ್ಯವಾದ ಚಿತ್ರಣ ನಮಗೆ ಅರ್ಥವಾಗುವುದು ಸಾಧ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Magnanimous situations can only be experienced. They can not be narrated. One has to be there to understand the weight of such situations. Can any one imagine the expanse of the Himalayas by reading about it in a book or seeing a picture?" - Mankutimma

Themes

WisdomLife

Video Section

Video Coming Soon

Detailed video explanations by scholars and experts will be available soon.