Mankutimmana Kagga by D.V. Gundappa
ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ । ಇಲ್ಲ ನಮಗೊರೆಕೋಲ್, ತಿಳಿಬೆಳಕುಮಿಲ್ಲ ॥ ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು । ಸಲ್ಲದುಬ್ಬಟೆ ನಮಗೆ - ಮಂಕುತಿಮ್ಮ ॥ ೬೮೬ ॥
ella bari goNagATa, tiNakATa, taDakATa । illa namage UrekOl, tiLibeLakumilla ॥ ballatana mabbinali nidrisade tevaLuvudu । sallada ubbaTe namage - Mankutimma ॥ 686 ॥
ನಮ್ಮ ಬದುಕಿನಲ್ಲಿ ನಾವು ಮಾಡುವುದೆಲ್ಲವೂ ಒಂದು ರೀತಿಯ ತಿಣುಕಾಟ, ಪರದಾಟ. ಅದನ್ನು ಮಾಡಲು ನಮ್ಮ ತಡಕಾಟ ಮತ್ತು ಗೊಣಗಾಟ. ಬದುಕಿನಲ್ಲಿ ಸ್ಥಿರವಾಗಿ ನಿಲ್ಲಲು ನಮಗೆ ಒಂದು ಊರುಗೋಲಿಲ್ಲ ಅಥವಾ ತಿಳಿಯಾದ ಜ್ಞಾನವೂ ಇಲ್ಲ. ನಮ್ಮ ಎಲ್ಲ ಮಾನಸಿಕ ಮತ್ತು ದೈಹಿಕ ಓಡಾಟಗಳಿಗೆ ಒಂದು ನಿಶ್ಚಿತ ಅರಿವಿನ ಆಧಾರವಿಲ್ಲ, ಎಚ್ಚರವೂ ಇಲ್ಲ ನಿದೆಯೂ ಇಲ್ಲ ಒಂದು ರೀತಿಯ ‘ಮಂಪರು’. ಆದರೂ ಬೇಡವಾದ ಅಥವಾ ಸೂಕ್ತವಲ್ಲದ ಉತ್ಸಾಹ ನಮಗೆ ಎಂದು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನರು ಈ ಮುಕ್ತಕದಲ್ಲಿ.
Life is filled with nothing but grouses, struggles and obstacles. There is no supporting stick that we can hold. Neither there is ample light to see the path. In spite of this, we muster all our strength, lose our sleep and crawl along some path. We aim to get through this life like this - it is an overambitious task." - Mankutimma
Video Coming Soon
Detailed video explanations by scholars and experts will be available soon.