Mankutimmana Kagga by D.V. Gundappa
ಅಂತೊ ಇಂತೋ ಎಂತೊ ಜೀವಕಥೆ ಮುಗಿಯುವುದು । ಅಂದೊ ಇಂದೋ ಎಂದೊ ಜನುಮ ಕಳೆಯುವುದು ॥ ಒಂದೆ ಮರೆವಿನ ಮುಸುಕು ಮುಸುಕಲಿಹುದೆಲ್ಲವನು । ಸಂತಸದ ಮಾತಿಷ್ಟೆ - ಮಂಕುತಿಮ್ಮ ॥ ೬೮೫ ॥
anto intO ento jIvakathe mugiyuvudu । ando indO endO januma kaLeyuvudu ॥ onde marevina musuku musukalihudu ellavanu । santasada mAtiShTe - Mankutimma ॥ 685 ॥
ಹಾಗೋ ಹೇಗೊ ಹೇಗೋ ಒಂದು ಹಾಗೆ ಬದುಕಿನ ಕತೆಯೂ ಅಂತ್ಯವಾಗುವುದು ಈ ಜನ್ಮದ ಅಂತ್ಯದೊಂದಿಗೆ ಈ ಜನ್ಮದಲ್ಲಿ ನಡೆದ ಎಲ್ಲ ಘಟನೆಗಳ, ಅರಿತುಕೊಂಡ ಎಲ್ಲ ವಿಷಯಗಳ ಮತ್ತು ವ್ಯಕ್ತಿಗಳ ನೆನಪೂ ಮಾಸಿಹೋಗುವುದು. ಇಲ್ಲಿಂದ ಹೊರಡುವಾಗ ಅವುಗಳ ಮೂಟೆಯನ್ನು ಹೊತ್ತು ಹೋಗಬೇಕಾಗಿಲ್ಲವೆಂಬುದಷ್ಟೇ ಸಂತೋಷದ ವಿಷಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
By some way or other, this life will end. It could happen today or some specified date in future or some unknown date. But end is definite. On that day, in a blink of an eye - we forget everything. In our next birth, we would not remember anything from past. This is the only reason to be happy." - Mankutimma
Video Coming Soon
Detailed video explanations by scholars and experts will be available soon.