Mankutimmana Kagga by D.V. Gundappa
ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ । ಅವನ ಮಗ ಜವನ್ ಅದರ ಲೆಕ್ಕವಿರಿಸುವನು ॥ ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ । ಸವೆಸುವರು ತನುಘಟವ - ಮಂಕುತಿಮ್ಮ ॥ ೬೮೪ ॥
divasa koLagadin Ayu rAshiyanu raviyu aLeyal । avana maga javan adara lekkava irisuvanu ॥ divijaroLage ivaru irvaru upakArigaLu namage । savesuvaru tanu ghaTava - Mankutimma ॥ 684 ॥
ನಾವು ಈ ಭೂಮಿಯ ಮೇಲೆ ಎಷ್ಟು ಗಂಟೆ, ಎಷ್ಟು ದಿವಸ, ಎಷ್ಟು ತಿಂಗಳು, ಎಷ್ಟು ವರ್ಷ ಬದುಕಿರುತ್ತೇವೆ ಎನ್ನುವುದು ನಮ್ಮ ಆಯಸ್ಸು. ಸೂರ್ಯನ ಉದಯ ಮತ್ತು ಅಸ್ತಮಾನಗಳ ಅಧಾರದ ಮೇಲೆ ನಾವು ಅದರ ಲೆಕ್ಕವನ್ನು ಹಾಕುತ್ತೇವೆ. ಹಾಗೆಯೇ ಸೂರ್ಯನ ಮಗನಾದ ಯಮನು ನಾವು ಎಷ್ಟು ದಿನ ಈ ಜಗತ್ತಿನಲ್ಲಿ ಇರಬೇಕು ಎಂದು ಲೆಕ್ಕವಿಟ್ಟುಕೊಂಡು, ಸರಿಯಾದ ಸಮಯಕ್ಕೆ ನಮ್ಮನ್ನು ಇಲ್ಲಿಂದ ಕರೆದುಕೊಂಡುಹೋಗುತ್ತಾನೆ . ಈ ದೇಹವನ್ನು ಸವೆಸುವುದರಲ್ಲಿ ಮತ್ತು ಇದರ ಅಂತ್ಯದಲ್ಲಿ ಈ ದೇವತೆಗಳಿಬ್ಬರು ನಮಗೆ ಬಹಳ ಉಪಕಾರ ಮಾಡುತ್ತಾರೆ ಎಂದು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
One determines the amount of grains in a heap by using measuring a fixed quantity (using a standard measuring device) repeatedly. Just like that, Sun measures our life span one day at a time. His son, Yama (God of death) keeps count of the measure. Of all the Gods, these two are the ones most helpful to mankind. They help us lose this body. (and perhaps become one with the universe)" - Mankutimma
Video Coming Soon
Detailed video explanations by scholars and experts will be available soon.