Mankutimmana Kagga by D.V. Gundappa
ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ । ಸವೆಯಿಸುತಲೆಲ್ಲವನು ಕಡೆಗೊಯ್ವನವನು ॥ ಕವಳಿಸುವುದೆಲ್ಲವನು ಮರೆವು; ಬಾಳೊಲ್ ಅದೊಂದು । ಶಿವಕೃಪೆಯ ಲಕ್ಷಣವೊ - ಮಂಕುತಿಮ್ಮ ॥ ೬೮೩ ॥
ravi nilade suttutire koragu kaLavaLavEko । saveyisutalu ellavanu kaDege oyvanu avanu ॥ kavaLisuvudu ellavanu marevu; bALol adondu । shivakRupeya lakShaNavo - Mankutimma ॥ 683 ॥
ಕಾಲದ ಪ್ರವಾಹ ನಿರಂತರ. ಅದರಂತೆಯೇ ಸೂರ್ಯೋದಯ ಸೂರ್ಯಾಸ್ಥಮಾನಗಳು ಅವ್ಯಾಹತ ನಡೆಯುತ್ತಲೇ ಇರುವಾಗ, ಕಾಲ ಕಳೆದಂತೆ ಎಲ್ಲಕ್ಕೂ ಒಂದು ಅಂತ್ಯವಿರುತ್ತದೆ. ಕಳೆದುಹೋದ ವಿಷಯಗಳೆಲ್ಲ ನಮ್ಮ ನೆನಪಿನಿಂದ ಮರೆಯಾಗುತ್ತದೆ. ಕಡೆಗೆ ಎಲ್ಲವನ್ನೂ ಮರೆತುಹೋಗುವ ವರವನ್ನು ನಮಗೆ ಪರಮಾತ್ಮ ಕರುಣಿಸಿದ್ದಾನೆ ಎಂದು ಜೀವನದ ನಶ್ವರತೆಯನ್ನು ಅರುಹಿ ಮತ್ತು ಎಲ್ಲವೂ ತಾತ್ಕಾಲಿಕವಾಗಿರುವಾಗ ನಿನಗೆ ಚಿಂತೆ ಮಾಡಲು ಏನಾದರೂ ಕಾರಣವಿದೆಯೇ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Why do you worry when Sun is revolving non-stop every day? He will outlast everything in this world and take everything with him. We will have numerous lives during his lifetime. But our forgetfulness will consume everything and reset once in every birth. We should consider this as a boon because if we could remember across births, life would be very difficult." - Mankutimma
Video Coming Soon
Detailed video explanations by scholars and experts will be available soon.