Mankutimmana Kagga by D.V. Gundappa
ದಿವಸದಿಮ್ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ । ಭವಿಷಿಯವ ಚಿಂತಿಸದೆ ಬದುಕ ನೂಕುತಿರು ॥ ವಿವರಗಳ ಜೋಡಿಸುವ ಯಜಮಾನ ಬೇರಿಹನು । ಸವೆಸು ನೀಂ ಜನುಮವನು - ಮಂಕುತಿಮ್ಮ ॥ ೬೮೨ ॥
divasadim divasakke, nimiShadim nimiShakke । bhaviShiyava chintisade baduka nUkutire ॥ vivaragaLa jODisuva yajamAna bErihanu । savesu nIm janumavanu - Mankutimma ॥ 682 ॥
ಮುಂದೇನಾಗುವುದೋ ಎಂದು ಚಿಂತಿಸದೆ ನಿತ್ಯದ ಬದುಕನ್ನು ಜೀವಿಸು. ನಮ್ಮ ಬದುಕಿನ ಅನುಕ್ಷಣವನ್ನೂ ಹೊಂದಿಸುವ ಜೋಡಿಸುವ ನಮ್ಮ ಯಜಮಾನ ಬೇರೆ ಇದ್ದಾನೆ. ಹಾಗಾಗಿ ಸುಮ್ಮನೆ ಬದುಕನ್ನು ಸವೆಸು ಎಂದು ಅನುದಿನವೂ ಚಿಂತೆಗಳ ಮಡುವಿನಲ್ಲಿ ಮುಳುಗಿರುವವರಿಗೆ ಒಂದು ಸಲಹೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Day to day, minute to minute you spend life by thinking (worrying) about the immediate future. All the while there is a different master who is choreographing your life. You should just look to live through this life." - Mankutimma
Video Coming Soon
Detailed video explanations by scholars and experts will be available soon.