Mankutimmana Kagga by D.V. Gundappa
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? । ಸಂದರ್ಭ ಬರಲಿ, ಬಂದಾಗಳಾ ಚಿಂತೆ ॥ ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು । ಇಂದಿಗಿಂದಿನ ಬದುಕು - ಮಂಕುತಿಮ್ಮ ॥ ೬೮೧ ॥
mundEno, mattEno, indigaa mAtEke? । sandharbha barali, bandAgaLA chinte ॥ hondisuvanAro, ninna aaLalla, bErihanu । indige indina baduku - Mankutimma ॥ 681 ॥
ಮುಂದೆ ಏನಾಗುವುದೋ ಹೇಗಾಗುವುದೋ ಎಂದು ಇಂದು ಚಿಂತಿಸಬೇಡ. ಆ ಸಂದರ್ಭ ಬಂದಾಗ ಆ ಚಿಂತೆ ಮಾಡು. ನಮಗೆ ನಮ್ಮ ಜೀವನದಲ್ಲಿ ನಡೆವುದೆಲ್ಲವನೂ ಹೊಂದಿಸುವವನು ಬೇರೆ ಯಾರೋ. ಹಾಗೆ ಹೊಂದಿಸುವವನು ನೀನು ಹೇಳಿದಂತೆ ಕೇಳುವ ನಿನ್ನ ಸೇವಕನಲ್ಲ. ಹಾಗಾಗಿ ಇಂದು ನೀ ಇಂದಿನ ಬದುಕನ್ನು ಬದುಕು ಎಂದು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಬಗೆಯನ್ನು ನಮಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Why should now we talk about uncertainties of future? Let the future present itself and we shall think about it then. He who is arranging it all up is not your servant. He does not do it your liking or convenience. He has his own plans. So, live in the present and live life day by day. " - Mankutimma
Video Coming Soon
Detailed video explanations by scholars and experts will be available soon.