Mankutimmana Kagga by D.V. Gundappa
ಅರ್ಣವವ ಕಣ್ಣಿಂದ ಕಂಡ ಬೆರಗಾದೀತೆ । ವರ್ಣನೆಯನೋದಿದೊಡೆ, ತೆರೆಯನೆಣಿಸಿದೊಡೆ? ॥ ಪೂರ್ಣವಸ್ತುಗ್ರಹಣವಪರೋಕ್ಷದಿಂದಹುದು । ನಿರ್ಣಯ ಪ್ರತ್ಯಕ್ಷ - ಮಂಕುತಿಮ್ಮ ॥ ೬೮೮ ॥
arNavava kaNNinda kanDa beragu aadIte । varNaneyanu OdidoDe, tereyanu eNisidoDe? ॥ pUrNa vastu grahaNavu aparOkShadindahudu । nirNaya pratyakSha - Mankutimma ॥ 688 ॥
ಪ್ರತ್ಯಕ್ಷವಾಗಿ ಕಾಣದೆ ಕೇವಲ ಪುಸ್ತಕದಲ್ಲಿನ ವರ್ಣನೆಯನ್ನು ಓದಿ ಸಮುದ್ರದ ಬೆರಗನ್ನು ಅನುಭವಕ್ಕೆ ತಂದುಕೊಳ್ಳಲು ಸಾಧ್ಯವೇ? ಅಥವಾ ಸಮುದ್ರದ ಮೇಲೇಳುವ ಅಲೆಗಳನ್ನು ಎಣಿಸಿದರೆ ಸಮುದ್ರದ ಸೊಬಗು ಅನುಭವಕ್ಕೆ ಬರುವುದೇ? ಅದನ್ನು ಅರಿಯಲು ಪ್ರತ್ಯಕ್ಷ ನೋಡಬೇಕು ಅದರ ಸೊಬಗನ್ನು ಸವಿಯಬೇಕು. ಅದೇ ರೀತಿ ಯಾವುದೇ ವಸ್ತುವಿನ ನಿಜ ಸ್ವರೂಪವನ್ನರಿಯಲು ಪ್ರತ್ಯಕ್ಷವಾಗಿ ನೋಡಬೇಕು, ಅನುಭವಿಸಬೇಕು. ಪ್ರತ್ಯಕ್ಷಾನುಭವವಾದರೆ ಮಾತ್ರ ಒಂದು ವಸ್ತುವನ್ನು ನಿರ್ಣಾಯಕವಾಗಿ ಅರಿಯಲು ಸಾಧ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There is a awe experienced when one sees the ocean in front of him. The same cannot be achieved by reading about the ocean or by counting the waves and trying to gauge the magnanimity of the ocean from that. The essence of the 'whole' can only be got by experiencing it by being in presence of the same. The truth is apparent only then." - Mankutimma
Video Coming Soon
Detailed video explanations by scholars and experts will be available soon.