Back to List

Kagga 679 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ । ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ॥ ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- । ದೊಸೆದುನೋಳ್ಪನು ಜಾಣ - ಮಂಕುತಿಮ್ಮ ॥ ೬೭೯ ॥

shishugaLu avalakki bellada saMbhramava nODi । hasivanoMduvane hiriyanu? naliyadihane? ॥ viShaya samsaktha lOkavan anAsaktiyinda । osedu nOLpanu jANa - Mankutimma ॥ 679 ॥

Meaning in Kannada

ಮಕ್ಕಳು ಅವಲಕ್ಕಿ ಬೆಲ್ಲವನು ತಿನ್ನುವುದನ್ನು ನೋಡಿ ಮನೆಯ ಹಿರಿಯರು ತಮಗೂ ಹಸಿವಾಗಿದೆಯೆಂದು ಅದನ್ನು ಅಪೇಕ್ಷಿಸುವರೆ? ಆ ಮಕ್ಕಳು ತಿನ್ನುವುದನ್ನು ನೋಡಿ ತಾವು ಸಂತೋಷಪಡುತ್ತಾರೆ ಅಲ್ಲವೇ? ಹಾಗೆಯೇ ವಿಷಯಗಳ ಆಸಕ್ತಿಯಲ್ಲಿ ಮುಳುಗಿರುವ ಜಗತ್ತಿನ ಜನರನ್ನು ನೋಡಿ ಅವರಲ್ಲಿ ಅನಾದರತೋರದಿದ್ದರೂ ಅನಾಸಕ್ತಿಯನ್ನು ತೋರುವವನೆ ಜಾಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Will a grownup ever get hungry (jealous) if he sees kids enjoying beaten rice and jaggery? Will they also not enjoy the sight? Just like that, a wise man will look at this material world with detachment. He will neither feel happy or sad with the events that take place." - Mankutimma

Themes

LifeDetachment

Video Section

Video Coming Soon

Detailed video explanations by scholars and experts will be available soon.