Mankutimmana Kagga by D.V. Gundappa
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ । ನಿನ್ನ ಮಮತೆಯ ನೂಲ ವಿಧಿಯ ಪರಿದಂದು ॥ ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು । ಛಿನ್ನವಾದಂದೆ ಸೊಗ - ಮಂಕುತಿಮ್ಮ ॥ ೬೭೮ ॥
dhanyatamavA ghaLige, puNyatamavA ghaLige । ninna mamateya nUla vidhiye paridandu ॥ unnatiyenAtmavanu taDediDuva pAshagaLu । ChinnavAdande soga - Mankutimma ॥ 678 ॥
ಆ ವಿಧಿಯ ನೆರವಿನಿಂದ ಆತ್ಮೋದ್ಧಾರಕ್ಕೆ ಅಡ್ಡಿಯಾಗಿರುವ, ಈ ಜಗತ್ತಿನ ಮೇಲಿನ ಮಮಕಾರ ಮೋಹಗಳ ಪಾಶದ ಕೊಂಡಿಗಳು ಎಂದು ಕಳಚಿಕೊಂಡು, ಕತ್ತರಿಸಿ ಹೋಗಿ ನಾಶವಾಗುತ್ತವೆಯೋ ಅಂದೇ ‘ಧನ್ಯ’ತಮವಾದಂತಹ ಮತ್ತು ‘ಪುಣ್ಯ’ತಮವಾದ ಘಳಿಗೆ ಮತ್ತು ಅದೇ ನಮಗೆ ಲಭಿಸುವ ಜೀವನದ ನಿಜವಾದ ಸೊಗಸು ಎಂದು ಈ ಜಗತ್ತಿನೊಂದಿಗೆ ನಮಗಿರುವ ಮೋಹ ಮತ್ತು ನಿರ್ಮೋಹದ ವಿಚಾರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
It is a satisfactory and an auspicious moment when fate the thread of affection is severed by Fate. It is these bondages that prevent the uplift of the soul. One can rejoice when those strings are cut." - Mankutimma
Video Coming Soon
Detailed video explanations by scholars and experts will be available soon.