Mankutimmana Kagga by D.V. Gundappa
ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ । ಚಪಲದಿಂ ಕಣ್ಣನತ್ತಿತ್ತಲಲಸುತಿರೆ ॥ ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ । ವಿಫಲ ವಿಪರೀತಾಶೆ - ಮಂಕುತಿಮ್ಮ ॥ ೬೭೫ ॥
aparimitavEnalla jIvanake labhya sukha । chapaladiM kaNNanu attittalu alasutire ॥ svaparisthitiya dharma naShtavahudoMde phala । viphala viparItAshe - Mankutimma ॥ 675 ॥
ಜೀವನದಲ್ಲಿ ಎಲ್ಲರಿಗೂ ಸುಖಪಡಲು ಸಾಧ್ಯವಿದೆ. ಆದರೆ ನಮಗೆ ಸುಖನೀಡುವ ಆ ‘ಸುಖ’ ಸಾಧನಗಳಿಗೆ ಮಿತಿಯಿದೆ. ನಾವು ಇರುವ ಪರಿಸ್ಥಿತಿಯ ಧರ್ಮದ ಚೌಕಟ್ಟನ್ನು ಮೀರಿ, ಚಪಲತೆ ಮತ್ತು ಅತಿ ಆಸೆಯಿಂದ, ಸುಖವನ್ನು ನಾನಾ ಕಡೆ ಅರಸಿದರೆ, ಅದು ಮರೀಚಿಕೆಯಂತೆ ಕೈಗೆ ಎಟುಕದೆ, ಸಂದ ಸುಖವನ್ನೂ ಅನುಭವಿಸಲಾಗದೆ, ವಿಪರೀತ ಆಸೆಯಿಂದ ಕೇವಲ ವೈಫಲ್ಯವನ್ನು ಅನುಭವಿಸಬೇಕಾಗುತ್ತದೆ ಎಂದು ಸುಖವನ್ನು ಅನುಭವಿಸದೆ, ಅರಸುವುದರಲ್ಲೇ ವ್ಯರ್ಥ ಕಾಲಯಾಪನೆ ಮಾಡುವವರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The amount of pleasures one can enjoy in his lifetime is not limitless. If one lets his eyes wander all around, then the only result would be to slip from the righteous ways. Greed always results in adverse results." - Mankutimma
Video Coming Soon
Detailed video explanations by scholars and experts will be available soon.