Mankutimmana Kagga by D.V. Gundappa
ಸ್ವಾರಸ್ಯವಮಿತಮಾರಿಗುಮಿರದು ಜೀವನದಿ । ಪಾರದಿರ್ಕೆಯ ನೆನೆದು ನೆಡೆಯಲದು ಸಫಲ ॥ ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು । ಆರೋಗಿಸಿರುವುದನು - ಮಂಕುತಿಮ್ಮ ॥ ೬೭೬ ॥
svArasyam amitam Arigum iradu jIvanadi । pArada irkeya nenedu neDeyalu adu saphala ॥ sAraMgaL ella paNgaLum ondaroL iravu । aarOgisu iruvudanu - Mankutimma ॥ 676 ॥
ಎಲ್ಲ ಹಣ್ಣುಗಳ ಸಾರ, ಸತ್ವ ಮತ್ತು ರುಚಿ ಒಂದೇ ಹಣ್ಣಿನಲ್ಲಿ ಇರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಮಗೆ ಜಗತ್ತಿನ ಎಲ್ಲ ಸುಖಗಳ ಅನುಭವವೂ ಒಂದೇ ಸಲ ಲಭ್ಯವಾಗಲು ಸಾಧ್ಯವಿಲ್ಲ. ಯಾರಿಗೂ ಅ’ಮಿತ’ವಾದ, ‘ಪಾರ’ವಿಲ್ಲದ ಸ್ವಾರಸ್ಯ, ಸುಖ ಬದುಕಿನಲ್ಲಿ ಇರುವುದಿಲ್ಲ. ಪ್ರತಿಯೊಬ್ಬರ ಸುಖಕ್ಕೂ ಒಂದು ಮಿತಿಯಿರುತ್ತದೆ. ನಮಗೆ ಸಿಗುವ ಮತ್ತು ನಾವು ಅನುಭವಿಸಲಾಗುವ ಸಂತೋಷ ಮತ್ತು ಸುಖಗಳ ಮಿತಿಯನ್ನು ಅರಿತು ಅನುಭವಿಸಿ ಬಾಳಿದರೆ ಬದುಕು ಸಫಲವಾಗುತ್ತದೆ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There will not be infinite variety in any one person's life. One can not get it all. If one understands the existence of such limit, then life will be fruitful. All the tastes can not be present in any one fruit. You must enjoy what ever fruit you get." - Mankutimma
Video Coming Soon
Detailed video explanations by scholars and experts will be available soon.