Mankutimmana Kagga by D.V. Gundappa
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ । ತೊಟ್ಟಲಿಗೆ ಹಬ್ಬ ಮಸಣವು ತೇಗುತಿರಲು ॥ ಹುಟ್ಟಿದವರೆಲ್ಲ ಸಾಯದೆ ನಿಲ್ತೆ, ಹೊಸತಾಗಿ । ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ ॥ ೬೭೪ ॥
toTTilugaLeShTo masaNagaLaShTu dhareyoLage । toTTalige habba masaNavu tEgutiralu ॥ huTTidavarella sAyade nilte, hosatAgi । huTTuvarge eDeyelli? - Mankutimma ॥ 674 ॥
ಈ ಜಗತ್ತಿನಲ್ಲಿ ಹುಟ್ಟಿದವರಿಗಾಗಿ ಇರುವ ತೊಟ್ಟಿಲುಗಳು ಎಷ್ಟು ಇವೆಯೋ, ಸತ್ತವರಿಗಾಗಿ ಸ್ಮಶಾನಗಳೂ ಅಷ್ಟೇ ಇವೆ. ಸ್ಮಶಾನವು ಸತ್ತವರನ್ನು ಸ್ವೀಕರಿಸಿ ಹೇಗೆ ನುಂಗಿ ತೇಗುತ್ತದೆಯೋ ಹಾಗೆಯೇ ಹುಟ್ಟಿದವರನ್ನು ಸ್ವೀಕರಿಸಿ ಹಬ್ಬವನ್ನಾಚರಿಸುತ್ತವೆ ತೊಟ್ಟಿಲುಗಳು. ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲ ಸಾಯದೆ ಇಲ್ಲೇ ಉಳಿದುಬಿಟ್ಟರೆ ಹೊಸದಾಗಿ ಹುಟ್ಟುವವರಿಗೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ಹುಟ್ಟು ಸಾವುಗಳ ಅನಿವಾರ್ಯತೆಯನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There are as many cradles as funerals in this world. We celebrate at the sight of a cradle without realizing that it will be consumed by a funeral. If those who are born don't die, then where is place for the newly born?" - Mankutimma
Video Coming Soon
Detailed video explanations by scholars and experts will be available soon.