Mankutimmana Kagga by D.V. Gundappa
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು । ತಿಂದು ನಿನ್ನನ್ನಋಣ ತೀರುತಲೆ ಪಯಣ ॥ ಹಿಂದಾಗದೊಂದು ಚಣ, ಮುಂದಕುಂ ಕಾದಿರದು । ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ॥ ೬೭೩ ॥
ondagaLu hecchiradu, ondagaLu koreyiradu । tindu ninna anna RuNa tIrutale payaNa ॥ hindAgadu ondu chaNa, mundakum kAdiradu । sanda lekkavadella - Mankutimma ॥ 673 ॥
ನಮ್ಮ ಜೀವನದಲ್ಲಿ ನಾವು ಸೇವಿಸಬೇಕಾದ ಆಹಾರದ ಒಂದು ಅಗಳೂ ಅಧಿಕವಾಗದು ಅಥವಾ ಒಂದು ಅಗಳೂ ಕಡಿಮೆಯಾಗದು. ಹೀಗೆ ನಮ್ಮ ಅನ್ನದ ಋಣ ಈ ಜಗತ್ತಿನಲ್ಲಿ ಮುಗಿದೊಡನೆಯೇ ಇಲ್ಲಿಂದ ಪಯಣ ಬೆಳಸಬೇಕು. ನಮಗೆ ಎಷ್ಟು ದಿನ ಎಷ್ಟು ಗಂಟೆ ಮತ್ತು ಎಷ್ಟು ಕ್ಷಣ ಈ ಜಗತ್ತಿನಲ್ಲಿ ಇರಬೇಕೋ ಅದಕ್ಕಿಂತ ಒಂದು ಕ್ಷಣ ಕಡಿಮೆಯೋ ಅಥವಾ ಒಂದು ಕ್ಷಣ ಅಧಿಕವಾಗೋ ಇಲ್ಲಿ ಇರಲಾಗದು. ಲೆಕ್ಕ ಮುಗಿದ ಒಡನೆಯೇ ನಮ್ಮ ಇಹಲೋಕದ ಪ್ರಯಾಣ ಕೈಗೊಳ್ಳಬೇಕು ಎಂದು ಬದುಕಿನ ಅನಿವಾರ್ಯತೆಯನ್ನು ನಮಗೆ ಈ ಸಾಲುಗಳಲ್ಲಿ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
You shall not get a grain more or a grain less. After having collected the debt of rice, you should leave this world. The time of departure does not get a second faster nor does it get delayed even by a second. All the necessary calculations are already taken into account. " - Mankutimma
Video Coming Soon
Detailed video explanations by scholars and experts will be available soon.