Back to List

Kagga 672 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ । ಸತ್ರದಲಿ ನೇಮದಿಂದಿರಲಿಕೆಡೆಯುಂಟು ॥ ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- । ಪತ್ಯದವ ಮೆಚ್ಚುವನು - ಮಂಕುತಿಮ್ಮ ॥ ೬೭೨ ॥

yAtrikaru nAvu, divya kShEtravu ee lOka । satradali nEmadinda iralike eDeyunTu ॥ rAtri mUrAytu horaDene teraLidoDe, pAru। patyadava mecchuvanu - Mankutimma ॥ 672 ॥

Meaning in Kannada

ಈ ಜಗತ್ತು ಒಂದು ಧರ್ಮಛತ್ರವಿದ್ದಂತೆ. ಇಲ್ಲಿ ತಂಗಲು ಕೆಲವು ನಿಯಮಗಳನ್ನು ಪಾಲಿಸಬೇಕು. ನಿಯಮದ ಪ್ರಕಾರ ಅಲ್ಲಿದ್ದು, ಹೊರಡೆಂದಾಗ ಹೊರಟರೆ, ಅದರ ಮೇಲ್ವಿಚಾರಕ ಮೆಚ್ಚುವನು. ಇಲ್ಲದಿದ್ದರೆ ಬಲವಂತವಾಗಿ ಹೊರದಬ್ಬುವನು, ಎಂದು ಈ ಜಗತ್ತಿನಲ್ಲಿ ನಮ್ಮ ಬದುಕಿಗಿರುವ ನಿಯಮವನ್ನು, ಒಂದು ಉಪಮೆಯ ಆಧಾರದಿಂದ ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು.

Meaning & Interpretation

We are tourists who are visiting this holy place (this world). We stay at this free hostel. We have to abide by the rules of this place. After three nights, we have to leave. If we do so as soon as we are asked to leave, then the care-taker (God) will be happy." - Mankutimma

Themes

DevotionLifeDetachmentLove

Video Section

Video Coming Soon

Detailed video explanations by scholars and experts will be available soon.