Mankutimmana Kagga by D.V. Gundappa
ತಿರಿದನ್ನವುಂಬಂಗೆ ಹುರುಡೇನು, ಹಟವೇನು । ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ ॥ ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? । ಗರುವವೇತಕೆ ನಿನಗೆ? - ಮಂಕುತಿಮ್ಮ ॥ ೬೭೧ ॥
tiridanna umbange huruDEnu, haTavEnu । tirupeyiDuvaru kupisi birunuDiya nuDiye ॥ duradurane nODi nInedurunuDi nuDiyuvude? । garuvavEtake ninage? - Mankutimma ॥ 671 ॥
ಭಿಕ್ಷೆ ಬೇಡಿ ತಿನ್ನುವವನಿಗೆ ಪೈಪೋಟಿ, ಹಠ ಇರಬಹುದೇ? ತಿರುಪೆ ನೀಡುವವನ ಮೇಲೆ ಕೋಪಿಸಿಕೊಂಡು ಅವನನ್ನು ಬಿರುಸಾದ ನುಡಿಗಳಿಂದ ನೀನು ನುಡಿಯಬಹುದೇ? ಬೇಡುವುದೇ ಭಿಕ್ಷೆಯಾದಮೇಲೆ ನಿನಗೆ ಗರ್ವವಿರಬಹುದೇ? ಎಂದು ಒಂದು ಗಹನವಾದ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
You are beggar in this world seeking alms (not being in control yourself). That being so, what value does your jealousy or anger have? If the person giving alms says a harsh word or two, do you stare back and yell? No, you just suck it up and collect alms. What else is there in this world that you can take pride on?" - Mankutimma
Video Coming Soon
Detailed video explanations by scholars and experts will be available soon.