Mankutimmana Kagga by D.V. Gundappa
ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? । ನರರ ಕೀಳ್ತನಕೆಲ್ಲ ಪರಿಹಾರವೆಂತು? ॥ ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು । ಧರೆಯಂತರುಷ್ಣವನು - ಮಂಕುತಿಮ್ಮ ॥ ೬೭೦ ॥
baruva ella bEnegam maddanu aar irisiharu? । narara kILtanakella parihAraventu? ॥ kiridu pallanu tALikoLalebEkaShTiShTu । dhareya antaruShNavanu - Mankutimma ॥ 670 ॥
ಹೊಸಹೊಸದಾಗಿ ಬರುವ ರೋಗಗಳಿಗೆಲ್ಲ ಔಷಧವನ್ನು ಯಾರು ಕಂಡುಹಿಡಿದಿದ್ದಾರೆ? ಅದೇ ರೀತಿ ಈ ಜಗತ್ತಿನ ಮನುಷ್ಯರು ಹೊಸಹೊಸದಾಗಿ ಕಲಿಯುವ ದುರ್ಬುದ್ಧಿಗೆ ಪರಿಹಾರವೆಲ್ಲಿದೆ?. ನಾವು ಈ ಜಗತ್ತಿನಲ್ಲಿರಬೇಕು ಎಂದರೆ ಇಂತಹ ಅಂತರಂಗದ ಬಿಸಿಯನ್ನು ತಾಳ್ಮೆಯಿಂದ ನಗುನಗುತ್ತಾ ಸಾಧ್ಯವಾದಷ್ಟು ತಡೆದುಕೊಳ್ಳಬೇಕು, ಬೇರೆ ದಾರಿಯಿಲ್ಲ ಎಂಬಂತೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Has anyone been able to find a medicine for all ailments that can affect man? Is there any solution to the wretched behavior of man? We have no other way but to tolerate these by biting our teeth hard - just like the earth patiently holds the inner heat concealed." - Mankutimma
Video Coming Soon
Detailed video explanations by scholars and experts will be available soon.