Mankutimmana Kagga by D.V. Gundappa
ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ । ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ॥ ಈಗಲೊ ಆಗಲೋ ಎಂದೊ ಮುಗಿವುಂಟೆಂಬ । ಭಾಗ್ಯವನು ನೆನೆದು ನಲಿ - ಮಂಕುತಿಮ್ಮ ॥ ೬೬೯ ॥
hAgeyo hIgeyO hEge hEgeyo januma । sAgi mugivudu; mugidu marevudu ade sukRuta ॥ iigaLo aagalO endo mugivu unTemba । bhAgyavanu nenedu nali - Mankutimma ॥ 669 ॥
ಹೇಗೋ ಒಂದು ರೀತಿಯಲ್ಲಿ, ಹುಟ್ಟಿದ ನಮಗೆಲ್ಲಾ ಸಾವು ನಿಶ್ಚಿತ. ಈ ಜನುಮದಲ್ಲಿ ಹಿಂದಿನ ಜನುಮದ ನೆನಪಿಲ್ಲ. ಮುಂದಿನ ಜನುಮದಲ್ಲಿ ಇಂದಿನ ಜನುಮದ ನೆನಪಿರುವುದಿಲ್ಲ. ಅದೇ ನಮ್ಮ ಪುಣ್ಯ. ಕಡೆಗೂ ಒಂದು ದಿನ ಇದಕ್ಕೆಲ್ಲಾ ಅಂತ್ಯವಾಗುವುದು ಎಂಬ ಭಾಗ್ಯ ನಮಗೆ ಇದೆಯಲ್ಲಾ ಎಂದು ಸಂತಸಿಸಬೇಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Life begins. It progresses in which ever way possible - this, that, any which way. Finally it ends. It is best to forget it once it finishes. The fact that it will definitely end - now or a little later - is a fortune that we should relish." - Mankutimma
Video Coming Soon
Detailed video explanations by scholars and experts will be available soon.