Mankutimmana Kagga by D.V. Gundappa
ನೂರಾರು ಸರಕುಗಳು ಜೀವಿತದ ಸಂತೆಯಲಿ । ಊರಿನವು, ಕೇರಿಯವು, ಮನೆಯವಾತ್ಮದವು ॥ ಬೇರೆ ಬೇರೆ ಪುರಳ್ಗೆ ಬೇರೆ ನೆಲೆ, ಬೇರೆ ಬೆಲೆ । ತಾರತಮ್ಯವೆ ತತ್ತ್ವ - ಮಂಕುತಿಮ್ಮ ॥ ೬೬೬ ॥
nUrAru sarakugaLu jIvitada santeyali । Urinavu, kEriyavu, maneyavu Atmadavu ॥ bEre bEre puraLge bEre nele, bEre bele । tAratamyave tattva - Mankutimma ॥ 666 ॥
ಬದುಕಿನ ಸಂತೆಯಲ್ಲಿ ನೂರಾರು ವಸ್ತುಗಳು. ಕೆಲವು ನಮ್ಮ ಊರಿನವು, ಕೆಲವು, ನಮ್ಮ ಬೀದಿಯದ್ದು, ಕೆಲವು ನಮ್ಮ ಮನೆಯದ್ದು ಮತ್ತು ಕೆಲವು ಆತ್ಮದ್ದು. ಎಲ್ಲಕ್ಕೂ ಅದರದರದೇ ಸ್ಥಳ ಮತ್ತು ಅದರದರದೇ ಬೆಲೆ. ಈ ವಸ್ತುಗಳಲ್ಲಿ ತಾರತಮ್ಯವನ್ನು ಅರಿತು ನಮ್ಮ ಬದುಕಿನಲ್ಲಿ ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕು, ಯಾವುದಕ್ಕೆ ಯಾವ ಸ್ಥಾನಕೊಡಬೇಕು ಎಂದು ಅರಿತು ಬದುಕುವುದೇ ಬದುಕಿನ ತತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
In this market place of life, there are hundreds of commodities. They come from various villages, various streets, various home and various souls. Each philosophy has its own place of origin and its own value. Variety and diversity is the only rule. It is not fair to expect uniformity," - Mankutimma
Video Coming Soon
Detailed video explanations by scholars and experts will be available soon.