Back to List

Kagga 667 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು । ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ॥ ತನುವಿಗುಪಕೃತಿಗೆಯ್ವ ಭರದಿ ನೀನಾತುಮದ । ಅನುನಯವ ಕೆಡಿಸದಿರು - ಮಂಕುತಿಮ್ಮ ॥ ೬೬೭ ॥

maneya suDutiha benkiya uriyanu aarise nuggu । manava suDuva uriyinda dUra nIm nillu ॥ tanuvige upakRuti geyva bharadi nInu aatumada । anunayava keDisadiru - Mankutimma ॥ 667 ॥

Meaning in Kannada

ಮನಗೆ ಬೆಂಕಿ ಹೊತ್ತಿಕೊಂಡರೆ, ಅದನ್ನು ಆರಿಸಲು ನುಗ್ಗು. ಆದರೆ ಮನಸ್ಸನ್ನು ಸುಡುವ ಬೆಂಕಿಯಿಂದ ದೂರ ಇರು. ದೇಹಕ್ಕೆ ಆನಂದವನ್ನು ನೀಡುವ ಅತಿಯಾದ ಆಸೆಯಿಂದ ಆತ್ಮವನ್ನು ಕಡೆಗಣಿಸಬೇಡ ಎಂದು ಒಂದು ಸೂಕ್ತ ತಿಳುವಳಿಕೆಯನ್ನು ನೀಡಿದ್ದಾರೆ, ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ .

Meaning & Interpretation

If there is a fire burning your house, you must rush to run and douse it. If there is a similar flame in the corner of your mind and irritating you - you must stay away from it as much as possible. When you rush to give help to your body, you must take care not to disturb the state of balance in your mind." - Mankutimma

Themes

NatureSocietyLove

Video Section

Video Coming Soon

Detailed video explanations by scholars and experts will be available soon.