Mankutimmana Kagga by D.V. Gundappa
ತನುವ ತಣಿಸುವ ತುತ್ತು ಮನಕೆ ನಂಜಾದೀತು । ಮನಮೋಹ ಜೀವಕ್ಕೆ ಗಾಳವಾದೀತು ॥ ಅನುಭವದ ಪರಿಣಾಮವೊಂದರಿಂದೊಂದಕ್ಕೆ । ಗಣಿಸಾತ್ಮಲಾಭವನು - ಮಂಕುತಿಮ್ಮ ॥ ೬೬೫ ॥
tanuva taNisuva tuttu manake najAdItu । manamOha jIvakke gALavAdItu ॥ anubhavada pariNAma ondarinda ondakke । gaNisu Atma lAbhavanu - Mankutimma ॥ 665 ॥
ದೇಹಕ್ಕೆ ಹಿತವೆನಿಸುವ ಮತ್ತು ನಾಲಿಗೆಗೆ ರುಚಿಯಾದ ಆಹಾರದ ತುತ್ತು ಮನಸ್ಸಿಗೆ ವಿಷವಾಗಬಹುದು. ಮನಸ್ಸಿನ ಮೋಹ ಆತ್ಮವನ್ನು ಬಂಧನಕ್ಕೆ ಸಿಲುಕಿಸುವ ಗಾಳವಾಗಬಹುದು. ನಮಗಾಗುವ ಒಂದು ಅನುಭವದ ಪರಿಣಾಮ ಬಹು ವಿಧದಲ್ಲಿ ನಮ್ಮ ಮೇಲೆ ಆಗುತ್ತದೆ. ಆದರೆ ಆ ಪರಿಣಾಮಗಳಲ್ಲಿ ಆತ್ಮಕ್ಕೇನು ಲಾಭವಾಯಿತು ಎಂದು ನೀನು ಎಚ್ಚರನಾಗಿರು ಎಂದು ಒಂದು ಸಂದೇಶವನ್ನು ಮತ್ತು ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
We do some actions to satisfy our hunger. Those actions may cause mental agony (if we had to sell our respect). There are other actions we do only to please our mind. Those actions may endanger our lives (like a crime of passion). One experience leads to another in terms of causation. We should always evaluate the effect of any action in terms of what it does to our soul." - Mankutimma
Video Coming Soon
Detailed video explanations by scholars and experts will be available soon.