Mankutimmana Kagga by D.V. Gundappa
ನರನೊಂದುವೆವಹಾರಕೆರಡಾಯವೆಯ ಲೆಕ್ಕ । ಹೊರಗಣನುಭೋಗಕೊಂದೊಳನೀತಿಗೊಂದು ॥ ವರಮಾನ ದೇಹಕಾದೊಡೆ ಮಾನಸಕದೇನು? । ಪರಕಿಸಾ ಲೆಕ್ಕವನು - ಮಂಕುತಿಮ್ಮ ॥ ೬೬೪ ॥
narana ondu vevahArake eraDu Ayaveya lekka । horagaNa anubhOgake ondu oLa nItige ondu ॥ varamAna dEhakAdoDe mAnasakadEnu? । parakisA lekkavanu - Mankutimma ॥ 664 ॥
ಮನುಷ್ಯರ ವ್ಯವಹಾರಕ್ಕೆ ಎರಡು ಆಯಾಮಗಳು ಇರುತ್ತವೆ. ಒಂದು ‘ಆಯ’ ಮತ್ತು ಎರಡನೆಯದು ‘ವ್ಯಯ’. ಅವನ ಅನುಭವವೆಲ್ಲಕ್ಕೂ ಎರಡು ಮುಖಗಳಿರುತ್ತದೆ. ಒಂದು ಬಾಹ್ಯಾನುಭವಕ್ಕೆ ಮತ್ತೊಂದು ಒಳಗಿನ ನೀತಿಗೊಂದು. ಎಲ್ಲ ಅನುಭವಗಳು ದೇಹಕ್ಕಾದರೆ ಮನಸ್ಸಿಗೇನು. ಅದನ್ನು ಕೊಂಚ ಪರೀಕ್ಷಿಸಿ ನೋಡಿಕೋ ಎಂದು ನಮಗೆ ನಿರ್ದೇಶಿಸುತ್ತಾ, ಅಂತರಂಗ ಮತ್ತು ಬಹಿರಂಗದ ಅನುಭವಗಳನ್ನು ಪಡೆದುಕೊಳ್ಳುವ ಬಗೆಯನ್ನು ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Every transaction that man carries out results in two kinds of accounting. One for the external world (monies and goods) and other for his own conscience. The income got from the first account is used up for the benefit of the body. But how does the mind benefit? think about the second account." - Mankutimma
Video Coming Soon
Detailed video explanations by scholars and experts will be available soon.