Mankutimmana Kagga by D.V. Gundappa
ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ । ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು ॥ ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು । ಮರೆಯಬೇಡೊಳಬೆಲೆಯ - ಮಂಕುತಿಮ್ಮ ॥ ೬೬೩ ॥
eraDutera maulyangaLu ellakam lOkadali । paramArthakondu, sAmpratada arthakondu ॥ parikisu eraDam nInu; horabeleya guNipandu । mareya bEDa oLabeleya - Mankutimma ॥ 663 ॥
ಈ ಲೋಕದಲ್ಲಿ ಎಲ್ಲಕ್ಕೂ ಎರಡು ಬಗೆಯ ಅರ್ಥವುಂಟು ಮತ್ತು ಎರಡು ಬಗೆಯ ಮೌಲ್ಯಗಳುಂಟು. ಇಹಕ್ಕೊಂದು ಅರ್ಥ ಮತ್ತು ಮೌಲ್ಯ ಮತ್ತು ಪರಕ್ಕೊಂದು ಅರ್ಥ ಮತ್ತು ಮೌಲ್ಯ. "ನೀನು ಇವೆರಡನ್ನೂ ಪರೀಕ್ಷಿಸಿ ನೋಡು. ಮೌಲ್ಯಗಳ ಲೆಕ್ಕಾಚಾರವನ್ನ್ಹು ಹಾಕುವಾಗ ಮೇಲೆ ತೋರುವ ಅರ್ಥ ಮತ್ತು ಮೌಲ್ಯದ ಜೊತೆಗೆ ಪರಮಾರ್ಥ ಮತ್ತು ಅಂತರ್ಮೌಲ್ಯಗಳನ್ನು ನೀ ಮರೆಯಬೇಡ’ ಎಂದು ನಮ್ಮನ್ನು ಎಚ್ಚರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Everything in this world have two values associated with it. One is the absolute value that is based just n the universal invariant truth about it. The other is relative value based on the context of valuation. You must try to find out both. While you are trying to evaluate the situational value of anything, don't forget the intrinsic innate absolute value." - Mankutimma
Video Coming Soon
Detailed video explanations by scholars and experts will be available soon.