Mankutimmana Kagga by D.V. Gundappa
ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು । ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ॥ ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರೆ । ಸದ್ದುಮಾಡದೆ ಮುಡುಗು - ಮಂಕುತಿಮ್ಮ ॥ ೬೬೨ ॥
khadyOtanante biDugoLade dharmava charisu । vidyllateya teradi tEjagaLa sUsu ॥ geddudEnendu kELade, ninna kai mIre । saddu mADade muDugu - Mankutimma ॥ 662 ॥
ಒಂದು ಕ್ಷಣವೂ ಬಿಡುವಿಲ್ಲದೆ ಬೆಳಕ ನೀಡುವ ತನ್ನ ಧರ್ಮವನ್ನು ಆಚರಿಸುವ ಸೂರ್ಯನಂತೆ, ಬೆಳಕ ನೀಡುವ ಮಿಂಚ ಬಳ್ಳಿಗಳಂತೆ, ನೀನೂ ಸಹ ಜಗತ್ತಿನಲ್ಲಿ ನಿನಗೆ ವಿಧಿಸಿದ ಧರ್ಮವನ್ನು ಆಚರಿಸಲು ಪ್ರಯತ್ನಿಸು. ‘ ಇಂದರಿಂದ ಏನು ಪ್ರಯೋಜನ ಎಂದು ನಿನ್ನ ಸಾಧನೆಯ ಪ್ರಾಯೋಜಕತೆಯನ್ನು ಲೆಕ್ಕ ಹಾಕದೆ, ನಿನ್ನ ಕ್ಷಮತೆ ಅಥವಾ ಯೋಗ್ಯತೆ ಇರುವಷ್ಟು ನೀನು ನೀಡು. ನಿನ್ನ ಕೈ ಮೀರಿದರೆ ನಿ:ಶಬ್ದವಾಗಿ, ಸದ್ದಿಲ್ಲದೇ ಆ ಪರಮಾತ್ಮನಿಗೆ ಶರಣಾಗಿ ಬಿಡು ಎಂದು ಹಿತಬೋಧೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
Practice dharma for ever without giving up like the Sun. Exhibit brilliance (even if it is just for a moment) like a lightning bolt. If circumstances grow beyond your control, then submit to the providence without asking too many questions (about why and who won)." - Mankutimma
Video Coming Soon
Detailed video explanations by scholars and experts will be available soon.