Mankutimmana Kagga by D.V. Gundappa
ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ । ಫಲ ಮಾಗುವಂದು ತುತ್ತೂರಿ ದನಿಯಿಲ್ಲ ॥ ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ । ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ॥ ೬೬೧ ॥
iLeyinda moLakeyu ogevandu tamaTegaLilla । phala mAguvandu tuttUri daniyilla ॥ beLakIva sUrya chandraradondu saddilla । holi ninna tuTigaLanu - Mankutimma ॥ 661 ॥
"ಇಳೆಯಿಂದ ಕುಡಿಯೊಡೆದು ಮೊಳಕೆ ಭೂಮಿಯ ಪದರವನ್ನು ಸೀಳಿಕೊಂಡು ಬರುವಾಗ ಯಾವುದೇ ಅಬ್ಬರ ಆರ್ಭಟಗಳಿಲ್ಲದೆ ಬರುತ್ತದೆ. ಮರದಲ್ಲಿ ಕಾತ ಕಾಯಿ ಹಣ್ನಾಗುವಾಗ’ ನಾನು ಹಣ್ಣಾಗುತ್ತಿದ್ದೇನೆ ‘ ಎಂದು ತುತ್ತೂರಿ ಊದಿ ಮಾಗುವುದಿಲ್ಲ. ಜಗತ್ತಿಗೆ ಬೆಳಕನ್ನು ಈವ ಸೂರ್ಯ ಚಂದ್ರರೂ ಸಹ ಶಬ್ದವಿಲ್ಲದೆ ತಮ್ಮ ತಮ್ಮ ಕೆಲಸವನ್ನು ಮಾಡಿ ಹೋಗುತ್ತಾರೆ. ಹಾಗಿದ್ದಲ್ಲಿ ನೀನು ಯಾವ ಮಹಾ ಸಾಧನೆ ಮಾಡಿದ್ದೀಯೆ ಎಂದು ಜಂಬಕೊಚ್ಚಿಕೊಳ್ಳುತ್ತೀಯೆ? ನಿನ್ನ ತುಟಿಗಳನ್ನು ಹೊಲಿದಿಕೋ" ಎಂದು ಸಲಹೆಯನ್ನು ಇತ್ತಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
There are no drum rolls when a sprout rises out of the earth. No trumpets when fruits ripe. The Sun and the Moon who give us light work silently. You should stitch your lips shut." - Mankutimma
Video Coming Soon
Detailed video explanations by scholars and experts will be available soon.