Mankutimmana Kagga by D.V. Gundappa
ಗರುವಭಂಗವನಾಗಿಸಿದನು ಗರುಡಂಗೆ ಹರಿ । ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು ॥ ಕರುಬುವಿಧಿಸೈರಿಸನು ದರ್ಪವನದಾರೊಳಂ । ಶಿರವ ಬಾಗಿಹುದೆ ಸಿರಿ - ಮಂಕುತಿಮ್ಮ ॥ ೬೬೦ ॥
garuva bhangavanu aagisidanu garuDange hari । muriyisidanante phaluguna hemmeyanu ॥ karubuvidhi sairisanu darpavanu adAroLam । shirava bAgihude siri - Mankutimma ॥ 660 ॥
ಗರುಡನ ತಾಯಿ ವಿನುತೆ, ತನ್ನ ಸವತಿ ಕದ್ರುವಿನೊಡನೆ ಪಂದ್ಯದಲ್ಲಿ ಸೋತು ಅವಳ ದಾಸ್ಯವನ್ನು ಸ್ವೀಕರಿಸುತ್ತಾಳೆ. ತಾಯನ್ನು ದಾಸ್ಯದಿಂದ ಬಿಡಿಸಲು ದೇವಲೋಕದಿಂದ ಅಮೃತವನ್ನು ತರಲು ಹೊರಟುದೇವತೆಗಳೊಡನೆ ಹೋರಾಡಿ, ಕಡೆಗೆ ದರ್ಪದಿಂದ ಇಂದ್ರನಮೇಲೆ ಯುದ್ಧಕ್ಕೆ ನಿಂತಾಗ, ಇಂದ್ರ ‘ಹರಿ’ಯ ಮೊರೆ ಹೋಗಲು, ಹರಿಯ ಪಾದದಡಿ ನಲುಗಿದ ಗರುಡನ ಗರ್ವ ಭಂಗವಾಗುತ್ತದೆಂದು ಭಾಗವತ ಪುರಾಣ ಹೇಳುತ್ತದೆ. ಅದೇ ರೀತಿ ಕುರುಕ್ಷೇತ್ರ ಯುದ್ಧದಲ್ಲಿ ವೀರಾವೇಶದಿಂದ ಹೋರಾಡುತ್ತಾ ತನಗೆ ಸಮಾನರಾರೂ ಇಲ್ಲವೆಂದು ಬೀಗುತ್ತಿದ್ದ ಅರ್ಜುನನಿಗೆ, ಕೇವಲ ಒಂದು ಹದ್ದಿನಿಂದ ಗರ್ವ ಭಂಗವಾಗುವಂತಹ ಪರಿಸ್ಥಿತಿಯನ್ನು ಉಂಟುಮಾಡುತ್ತಾನೆ ಶ್ರೀ ಕೃಷ್ಣ.
Lord Vishnu made Garuda and Arjuna lose their arrogance by showing to them how insignificant their achievements were. Providence is jealous of people who show off their arrogance. It does not tolerate them. It will arrange circumstances such that arrogance is punished appropriately. So, it is always good to be humble." - Mankutimma
Video Coming Soon
Detailed video explanations by scholars and experts will be available soon.