Back to List

Kagga 656 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ । ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ॥ ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು । ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ॥ ೬೫೬ ॥

hesaru hesarembudEm? kasaru bIsuva gALi । haseyondu ninagEke brahmapuriyoLage ॥ shishuvASgu nIm manadi, hasuvAgu, sasiyAgu । kasaborakeyAgu iLege - Mankutimma ॥ 656 ॥

Meaning in Kannada

ಹೆಸರು ಹೆಸರೆಂಬುದು ಅದು ಏನು? ಕೊಳೆಯಿಂದ ಕೂಡಿದ ಉಸಿರು. ಈ ಜಗತ್ತಿನೊಳಗೆ ನಿನಗೆ ಬಿರುದು ಬಾವುಲಿಗಳ ಮನ್ನಣೆ ಏಕೆ ಬೇಕು? ಹಸುಗೂಸಿನಂತೆ ಮುಗ್ದನಾಗು, ಸಾಧು ಭಾವದ ಹಸುವಿನಂತಾಗು, ಮುಂದೆ ಗಿಡವಾಗಿ ಹೆಮ್ಮರವಾಗಿ ಹೂ, ಹಣ್ಣು ಮತ್ತು ಸುಗಂಧವನ್ನು ನೀಡುವ ಪುಟ್ಟ ಸಸಿಯಾಗು, ನಿನ್ನ ಮನಸ್ಸಿನ ಕಲ್ಮಷಗಳನ್ನು ಗುಡಿಸಿಹಾಕಲು ನೀನೇ ಒಂದು ಪೊರಕೆಯಾಗು ಎಂದು ಈ ಜಗತ್ತಿನಲ್ಲಿ ಖ್ಯಾತಿಯ ಬಯಕೆಯನ್ನು ಹತ್ತಿಕ್ಕಿ ಸಹಜವಾಗಿ ಹೇಗೆ ಬಾಳಬೇಕೆಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

What is fame? It is a breeze that carries foul smell. Why do you think that you deserve a permanent place (name) in this world? In your mind you become a sinless child, or a cow, or a useful plant, or at least be a broom that cleans the world. (these are things that do a lot of good without expectation of any return)" - Mankutimma

Themes

LifeMorality

Video Section

Video Coming Soon

Detailed video explanations by scholars and experts will be available soon.