Back to List

Kagga 655 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಕ್ಕಿಯೊಳಗನ್ನವನು ಮೊದಲಾರು ಕಂಡವನು? । ಅಕ್ಕರದ ಬರಹಕ್ಕೆ ಮೊದಲಿಗನದಾರು? ॥ ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ । ದಕ್ಕುವುದೆ ನಿನಗೆ ಜಸ? - ಮಂಕುತಿಮ್ಮ ॥ ೬೫೫ ॥

akkiyoLage annavanu modalAru kanDavanu? । akkarada barahakke modaliganu adAru? ॥ lekkavirisilla jaga tanna aadibandhugaLa । dakkuvude ninage jasa - Mankutimma ॥ 655 ॥

Meaning in Kannada

"ಇಂದು ಜಗತ್ತಿನ ಬಹುತೇಕ ಮಂದಿ ತಿನ್ನುವ ಅನ್ನವನ್ನು ಅಕ್ಕಿಯಿಂದ ಮಾಡಬಹುದು ಎಂದು ಕಂಡುಕೊಂಡಂತಹ ಮೊದಲ ಮಾನವನು ಯಾರು? ಅವನ ಹೆಸರೇ ಈ ಜಗತ್ತಿಗೆ ಗೊತ್ತೇ ಇಲ್ಲ!!!, ಅಲ್ಲವೇ? ನಾವಿಂದು ಬರೆಯುವ ಅಕ್ಷರಗಳನ್ನು ‘ಹೀಗೇ’ ಬರೆಯಬೇಕೆಂದು ಕಂಡುಹಿಡಿದವನು ಯಾರು ಎಂದು ನಮಗೆ ಗೊತ್ತಿಲ್ಲ. ಹೀಗೆ ಈ ಜಗತ್ತು, ಆದಿಯಲ್ಲಿ ಇಲ್ಲಿನ ವಸ್ತು ವಿಷಯಗಳನ್ನು ರೂಪಿಸಿದ ಆದಿ ಬಂಧುಗಳನ್ನೇ ಲೆಕ್ಕವಿರಿಸದೆ ಮರೆತುಹೋಗಿರುವಾಗ, ನೀನು ಯಾವ ಘನಕಾರ್ಯ ಮಾಡಿದ್ದೀಯೆ ಎಂದು ಯಶಸ್ಸನ್ನು ಅಪೇಕ್ಷೆಪಡುತ್ತಿದ್ದೀಯೆ? " ಎಂದು ಪ್ರಶ್ನಿಸುತ್ತಾ ಹೆಸರು ಪ್ರಖ್ಯಾತಿಗಳ ಹುಚ್ಚು ಹಿಡಿದವರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Who is the person who thought rice and be boiled for food? Who is the first person to use the alphabet to write? The world has not kept notes of its own ancestors who have contributed this immensely to its progress. Do you think you can attain fame that has eluded these people?" - Mankutimma

Themes

LifeSociety

Video Section

Video Coming Soon

Detailed video explanations by scholars and experts will be available soon.