Back to List

Kagga 654 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? । ಕಸದೊಳಗೆ ಕಸವಾಗಿ ಹೋಹನಲೆ ನೀನು? ॥ ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು । ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ॥ ೬೫೪ ॥

hesaru hesarendu nIm basavaLivudEkayya? । kasadoLage kasavAgi hOhanale nInu? ॥ musukalI dhareya marevu ennan, enuta bEDu । misukadiru maNNinali - Mankutimma ॥ 654 ॥

Meaning in Kannada

‘ ಹೆಸರನ್ನು ಗಳಿಸುವುದಕ್ಕೆ ಮತ್ತು ಗಳಿಸಿದ ಹೆಸರನ್ನು ಉಳಿಸಿಕೊಳ್ಳುವುದಕ್ಕೆ ನೀನು ಏತಕ್ಕ ದಣಿಯುತ್ತೀಯಾ? ಜಗತ್ತಿನ ಬೇರೆ ಕಸಗಳನತೆಯೇ ನೀನೂ ಸಹ ಕಸದಲ್ಲಿ ಕಸವಾಗಿ, ಮಣ್ಣಲ್ಲಿ ಮಣ್ಣಾಗಿ ಹೋಗುವವನು. ಜಗತ್ತಿನ ಜನರ ಮರೆವು ನನ್ನ ಹೆಸರನ್ನು ಮರೆಮಾಡಿಬಿಡಲಿ ಎಂದು ನೀನು ಪಾರ್ಥಿಸು. ಸತ್ತ ನಂತರವೂ ಹೆಸರನ್ನು ಉಳಿಸಿಕೊಳ್ಳುವ ಕೊರಗನ್ನು ನೀನು ಪಡಬೇಡ’ ಎಂದು ಖ್ಯಾತಿಯ ಮತ್ತು ಪ್ರಶಂಸೆಯ ಹಿಂದೆ ಓಡುವವರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Why are you toiling so hard to attain fame? One fine day, your fame will become garbage among all the other dirt of this world. If you were to pray God for something, let it me that the world forgets you very soon. Don't let yourself wallow in dirt." - Mankutimma

Themes

DevotionLifeSelf

Video Section

Video Coming Soon

Detailed video explanations by scholars and experts will be available soon.