Mankutimmana Kagga by D.V. Gundappa
ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ । ಕರುಬಿ ಜನ ಕೆಸರುದಾರಿಯಲಿ ಸಾಗುವುದು ॥ ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ । ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ॥ ೬೫೭ ॥
sirimAtrake enalla, peN mAtrake enalla । karubi jana kesaru dAriyali sAguvudu ॥ biruda gaLisalike esapa, hesara pasarisalu esapa । duritagaLge eNe unTe? - Mankutimma ॥ 657 ॥
ಜಗತ್ತಿನ ಜನರು ಕೆಟ್ಟ ದಾರಿಯಲ್ಲಿ ಹೋಗುವುದು ಕೇವಲ ಹಣವನ್ನು ಸಂಪಾದಿಸುವುದಕ್ಕೆ ಮಾತ್ರವಲ್ಲ, ಹೆಣ್ಣನ್ನು ಮೆಚ್ಚಿಸಲಿಕ್ಕಾಗಲೀ ಅಥವಾ ಪಡೆಯಲಿಕ್ಕಾಗಲೀ ಮಾತ್ರವಲ್ಲ. ಹೆಸರು ಗಳಿಸುವುದಕ್ಕೆ ಮತ್ತು ಆ ಗಳಿಸಿದ ಹೆಸರನ್ನು ಜಗತ್ತಿನ ನಾಲ್ಕೂ ಮೂಲೆಗಳಿಗೆ ಪ್ರಚಾರಮಾಡಿಕೊಳ್ಳಲಿಕ್ಕೆ ಇವನು ತುಳಿಯುವ ದುರ್ದಾರಿಗಳಿಗೆ, ಮಾಡುವ ಪಾಪಗಳಿಗೆ ಮಿತಿಯೇ ಇಲ್ಲ ಎಂದು ಇಂದಿಗೂ ಪ್ರಸ್ತುತವಾಗುವಂತೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
People do not leave the path of dharma and follow a muddy road not just for the well known reasons - wealth and women. They do it even for name and fame. There are enough sins committed by people to attain a good name and an ever spreading and never ending fame." - Mankutimma
Video Coming Soon
Detailed video explanations by scholars and experts will be available soon.