Mankutimmana Kagga by D.V. Gundappa
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ । ಚಿನ್ನದಾತುರಕಿಂತ ಹೆಣ್ಣುಗಂಡೊಲವು ॥ ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ । ತಿನ್ನುವುದದಾತ್ಮವನೆ - ಮಂಕುತಿಮ್ಮ ॥ ೬೫೨ ॥
annadAturakinta chinnadAtura tIkShNa। chinnadAturakinta heNNU ganDolavu ॥ mannaNeya dAhavu ee ellakam tIKShNatama । tinnuvudu aatmavane - Mankutimma ॥ 652 ॥
ಅನ್ನವನ್ನು ಪಡೆಯಬೇಕು ಎನ್ನುವ ತೀವ್ರತಮ ಬಯಕೆಗಿಂತ ಚಿನ್ನದಮೇಲಿನ ಆಸೆಯ ತೀವ್ರತೆ ಹೆಚ್ಚು, ಅದಕ್ಕಿಂತ ತೀವ್ರ ಹೆಣ್ಣುಗಂಡಿನ ಪರಸ್ಪರ ಆಕರ್ಷಣೆಯ ತೀವ್ರತೆ. ಇವೆಲ್ಲಕ್ಕಿಂತ ಮೀರಿದುದು ಮನ್ನಣೆಯ, ಪ್ರಚಾರದ ಆಸೆ. ಈ ಎಲ್ಲ ಆಸೆಗಳು ಆತ್ಮವನ್ನು ಕೊರಗಿಸಿ, ಸೊರಗಿಸಿ ತಿನ್ನುತ್ತವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
The longing for gold is stronger than that for food. Stronger than that is the longing of lovers for each other. Longing for fame is stronger than all of these. It has the ability to eat one's own soul." - Mankutimma
Video Coming Soon
Detailed video explanations by scholars and experts will be available soon.