Mankutimmana Kagga by D.V. Gundappa
ಮೌನದಿಂದಂಬಲಿಯನುಂಡು ತಣಿಯುವ ಮಾನಿ । ಶ್ವಾನನುಣುವೆಂಜಲೋಗರಕೆ ಕರುಬುವನೆ? ॥ ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ । ಮಾಣು ನೀಂ ತಲ್ಲಣವ - ಮಂಕುತಿಮ್ಮ ॥ ೬೫೧ ॥
mounadinda ambaliyanu unDu taNiyuva mAni । shvAnanu uNuva enjila Ogarake karubuvane? ॥ jnAni naDevam viShayataratama vivekadali । mANu nIm tallaNava - Mankutimma ॥ 651 ॥
ಮೌನದಿಂದ ಗಂಜಿಯನ್ನು ಕುಡಿದು ಸಂತುಷ್ಟಗೊಳ್ಳುವ ಮಾನಧನನಾದ ವ್ಯಕ್ತಿ, ಬೀದಿಯಲ್ಲಿ ಯಾರೋ ಬಿಸುಟ ಎಂಜಲೆಲೆಯಲ್ಲಿ ಮೃಷ್ಟಾನ್ನ ಭೋಜನವ ತಿನ್ನುವ ನಾಯಿಯನ್ನು ಕಂಡು ಕರುಬುವನೇನು? ಹೇಗೆ ಸರಿ ತಪ್ಪುಗಳನ್ನು ಅರಿತ ಜ್ಞಾನಿ ಬದುಕಿನಲ್ಲಿ ನಡೆದುಕೊಳ್ಳುತ್ತಾನೋ, ಹಾಗೆಯೇ ನೀನೂ ಸಹ ದೃಢಮನಸ್ಕನಾಗಿ, ತಲ್ಲಣವ ತೊರೆದು ನಡೆದುಕೋ ಎಂದು ನಮಗುಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
A respectable person can be satisfied by just eating malt. He will not feel jealous of a dog eating the left overs of a feast. A wise man knows the difference between the two which goes much beyond just the taste. You should imitate the wise man and bring calmness to your mind." - Mankutimma
Video Coming Soon
Detailed video explanations by scholars and experts will be available soon.