Back to List

Kagga 650 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ । ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ? ॥ ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ । ಬಾಗಿಸದಿರಾತ್ಮವನು - ಮಂಕುತಿಮ್ಮ ॥ ೬೫೦ ॥

rAgi muddeya nunge nalidu bALva aatange । kAge kadduNuva bhakShyava kanDu karube? ॥ nIguvudu hasivan uNisu entu appudu aadoDam । bAgisadiru aatmavanu - Mankutimma ॥ 650 ॥

Meaning in Kannada

ರಾಗಿ ಮುದ್ದೆಯ ತಿಂದು ಸಂತುಷ್ಟನಾಗಿ ನಲಿಯುವವನು, ಕಾಗೆ ಎಲ್ಲಿಂದಲೋ ಕದ್ದು ತಂದು ಉಣ್ಣುವ ಮೃಷ್ಟಾನ್ನ ಭೋಜನವನ್ನು ನೋಡಿ ಕರುಬುತ್ತಾನೆಯೇ? ಆಹಾರ ಎಂತಹದ್ದಾದರೂ ಅದು ಹಸಿವನ್ನು ಇಂಗಿಸುವುದು. ಅದನ್ನು ಕಷ್ಟಪಟ್ಟು ದುಡಿದು ಸಂಪಾದಿಸುವುದೇ ಮುಖ್ಯ. ಅದನ್ನು ಬಿಟ್ಟು ಮೃಷ್ಟಾನ್ನವನ್ನು ಪಡೆಯಲು ಆತ್ಮಾಭಿಮಾನವನ್ನು ಬಿಡಬೇಡ ಎಂದು ಬುದ್ಧಿವಾದದ ಕಿವಿಮಾತನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

If a person can live happily after eating just ragi balls (staple of the poor), then will he feel jealous of the crow that steals its meals from left-overs of a feast? Both of them are equivalent when it comes to satiating hunger. Do not compromise your soul for the left overs." - Mankutimma

Themes

Video Section

Video Coming Soon

Detailed video explanations by scholars and experts will be available soon.